ಸಮರ್ಥನಂ ವೀರೇಶ್‍ಗೆ ರಾಜ್ಯೋತ್ಸವ 'ಕೋವಿಡ್ ವಾರಿಯರ್ ಪ್ರಶಸ್ತಿ'

Update: 2020-11-02 17:59 GMT

ಬೆಳಗಾವಿ, ನ. 2: ಸಮರ್ಥನಂನ ಸಮಗ್ರ ನೆರವು ಮತ್ತು ಅರಿವಿನ ಅಭಿಯಾನಕ್ಕೆ ರಾಜ್ಯ ಸರಕಾರದಿಂದ ಪ್ರಶಂಸೆ ವ್ಯಕ್ತವಾಗಿದ್ದು, ಸಮರ್ಥನಂ ಅಂಗವಿಕಲರ ಸಂಸ್ಥೆಗೆ ಬೆಳಗಾವಿ ಜಿಲ್ಲಾಡಳಿತವು ರಾಜ್ಯೋತ್ಸವ ಕೋವಿಡ್ ವಾರಿಯರ್ಸ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಸೋಮವಾರ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಪ್ರಶಸ್ತಿ ಪ್ರದಾನ ಮಾಡಿದರು. ಅಸಹಾಯಕರಿಗೆ ನೆರವಾಗುವಲ್ಲಿ ಬೇರುಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಮರ್ಥನಂ ನಿರ್ದೇಶಕ ವಿರೇಶ್ ಕಿವದಾಸನ್ನವರ್ ಈ ಪುರಸ್ಕಾರವನ್ನು ಬೆಳಗಾವಿ ಜಿಲ್ಲಾಡಳಿತದಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ವೀಕರಿಸಿದರು.

ಮೌನ ಹೋರಾಟಗಾರರಾಗಿ ಹೊರಹೊಮ್ಮಿರುವ ವೀರೇಶ್ ಬೆಳಗಾವಿಯ ಸಮೃದ್ಧಿ ಸರ್ವೀಸ್ ಸೊಸೈಟಿಯ ಅಧ್ಯಕ್ಷರು ಆಗಿದ್ದು ಆಹಾರದ ಪಾಕೆಟ್‍ಗಳು, ದಿನಸಿ, ಔಷಧಗಳು, ಪಿಪಿಇಗಳು ಮತ್ತು ಸಾವಿರಾರು ಲೀಟರ್‍ಗಳ ಸ್ಯಾನಿಟೈಸರ್ ಅನ್ನು ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲ ಸಂಘ-ಸಂಸ್ಥೆಗಳ ಸದಸ್ಯರೊಂದಿಗೆ ವಿತರಿಸಿದ್ದರು.

ಸಾಂಕ್ರಾಮಿಕದಿಂದ ಆರೋಗ್ಯದ ಸಂಕಷ್ಟವಿದ್ದರೂ ಈ ಕಾರ್ಯಕ್ರಮವನ್ನು ನಾವು ಪ್ರಾರಂಭಿಸಿದೆವು ಅದಕ್ಕೆ ವಿಶೇಷಚೇತನರಿಗೆ ನೆರವು ಅಗತ್ಯವಾಗಿತ್ತು ಮತ್ತು ಸರಕಾರದ ಸಂಸ್ಥೆಗಳು ಪ್ರತಿಯೊಬ್ಬರನ್ನೂ ತಲುಪಲು ಸಾಧ್ಯವಿರಲಿಲ್ಲ. ಈ ಅಭಿಯಾನವು ಸಮಾಜದ ಎಲ್ಲ ವರ್ಗಗಳಿಗೂ ಅರಿವನ್ನು ಮೂಡಿಸುವುದು ಮತ್ತು ಭೌತಿಕ ನೆರವು ನೀಡುವುದಾಗಿತ್ತು. ಈ ಪ್ರಶಸ್ತಿಗಳು ನಮ್ಮ ಪ್ರಯತ್ನಗಳ ವ್ಯಾಪ್ತಿ ವಿಸ್ತರಿಸುವಲ್ಲಿ ನಮ್ಮ ನಿರ್ಧಾರಕ್ಕೆ ಮತ್ತಷ್ಟು ಶಕ್ತಿ ನೀಡಿವೆ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಜಿ.ಕೆ. ತಿಳಿಸಿದ್ದಾರೆ.

ಜಿಲ್ಲೆಯ ವಿಶೇಷಚೇತನರ ದತ್ತಾಂಶ ಮತ್ತು ನಾವು ಅವರೊಂದಿಗೆ ಸಂಪರ್ಕದಲ್ಲಿರುವುದರಿಂದ ನಾವು ಸಾಕಷ್ಟು ಸೇವೆ ಸಲ್ಲಿಸಬಹುದು. ನಮ್ಮ ಕೋವಿಡ್ ನೆರವು ಅಭಿಯಾನವು ವಿಶೇಷ ಚೇತನರ ಆಚೆಗೂ ವಿಸ್ತರಿಸಿದೆ. ನಾವು ವೈದ್ಯರು, ಪೊಲೀಸರು ಮತ್ತು ಆಶಾ ಕಾರ್ಯಕರ್ತರಿಗೆ ವಸ್ತುಗಳು ಹಾಗೂ ಎಲ್ಲ ಬಗೆಯ ನೆರವು ನೀಡಿದ್ದೇವೆ. ಈ ಕೆಲಸ ಮತ್ತು ಈ ಪ್ರಶಸ್ತಿಗಳು ನಮ್ಮ ಅಭಿಯಾನಕ್ಕೆ ಶಕ್ತಿಯನ್ನು ಪೂರೈಸುತ್ತವೆ ಎಂದು ವೀರೇಶ್ ಕಿವದಾಸನ್ನವರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News