ಅಮೆರಿಕಕ್ಕೆ ಸಮಾನವಾಗಿ ಆಧುನಿಕ ಸೇನೆ ನಿರ್ಮಾಣ: ಚೀನಾ ಕಮ್ಯುನಿಸ್ಟ್ ಪಕ್ಷ ನಿರ್ಧಾರ

Update: 2020-11-02 18:20 GMT

ಬೀಜಿಂಗ್ (ಚೀನಾ), ನ. 2: 2027ರ ವೇಳೆಗೆ ಅಮೆರಿಕಕ್ಕೆ ಸರಿಸಮಾನವಾಗಿ ಸಂಪೂರ್ಣ ಆಧುನಿಕ ಸೇನೆಯನ್ನು ಕಟ್ಟುವ ಯೋಜನೆಯನ್ನು ಇತ್ತೀಚೆಗೆ ಮುಕ್ತಾಯಗೊಂಡ ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸಮಾವೇಶವೊಂದು ಅಂತಿಮಗೊಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿಗೆ 2027ರಲ್ಲಿ ಒಂದು ಶತಮಾನ ತುಂಬುತ್ತದೆ.

ಆ ವೇಳೆಗೆ, ಸಂಪೂರ್ಣ ಆಧುನಿಕ ಸೇನೆಯೊಂದನ್ನು ಚೀನಾ ಕಟ್ಟುತ್ತದೆ. ಇದು ಭವಿಷ್ಯದ ರಾಷ್ಟ್ರೀಯ ರಕ್ಷಣಾ ಅಗತ್ಯಗಳಿಗೆ ಪೂರಕವಾಗಿರುತ್ತದೆ ಎಂದು ಸರಕಾರದ ಒಡೆತನದ ‘ಗ್ಲೋಬಲ್ ಟೈಮ್ಸ್’ ಚೀನಾದ ವಿಶ್ಲೇಷಕರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷದ ನಾಲ್ಕು ದಿನಗಳ ಪೂರ್ಣಾಧಿವೇಶನವು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News