ಪ್ರತ್ಯೇಕ ಪ್ರಕರಣ: ಹಾವು ಕಡಿತಕ್ಕೊಳಗಾಗಿ ಇಬ್ಬರು ರೈತರು ಮೃತ್ಯು
Update: 2020-11-03 12:01 IST
ಕಲಬುರಗಿ, ನ.3: ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ಇಬ್ಬರು ರೈತರು ಸಾವನಪ್ಪಿರುವ ಘಟನೆ ಜಿಲ್ಲೆಯ ಅಫ್ಝಲ್ ಪುರ ತಾಲೂಕಿನ ಪ್ರತ್ಯೇಕ ಗ್ರಾಮಗಳಲ್ಲಿ ನ.1ರಂದು ನಡೆದಿರುವುದು ವರದಿಯಾಗಿದೆ.
ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ಗ್ರಾಮದ ಖಾಜಪ್ಪ ಕೋತಿ (40) ಹಾಗೂ ಮಾತೊಳ್ಳಿ ಗ್ರಾಮದಲ್ಲಿ ಚಂದ್ರಸಾ ಪಾಸೋಡಿ (35) ಮೃತಪಟ್ಟವರಾಗಿದ್ದಾರೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹಾವು ಕಚ್ಚಿದ್ದು ಚಿಕಿತ್ಸೆಗಾಗಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾಗದ ಹಿನ್ನೆಯಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ.
ಈ ಕುರಿತು ಅಫ್ಝಲ್ಪುರ ಠಾಣೆಯ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.