'ಸಂಚಾರ ಪೊಲೀಸರಿಂದ ಲಂಚಕ್ಕೆ ಬೇಡಿಕೆ': ಗೃಹ ಸಚಿವರಿಗೆ ದೂರು ನೀಡಿದ ಮಾಜಿ ಡಿಸಿಎಂ ಅಳಿಯ

Update: 2020-11-03 14:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.3: ಸಂಚಾರ ನಿಯಮ ಉಲ್ಲಂಘನೆಯ ನೆಪಮಾಡಿ ಸಂಚಾರ ಪೊಲೀಸರೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಅಳಿಯ ವಿಜಯ್ ಹಿರೇಮಠ್ ದೂರಿದರು.

ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಸಿಗ್ನಲ್ ಜಂಪ್ ಮಾಡಿದ ನನ್ನನ್ನು ಪೇದೆಯೊಬ್ಬರು ನಿಲ್ಲಿಸಿ ಸಿಗ್ನಲ್ ದಂಡ ಕೇಳಿದರು. ಹರೇ ಕೃಷ್ಣ ಜಂಕ್ಷನ್‍ನಲ್ಲಿ ಸಿಗ್ನಲ್ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿರುವುದನ್ನು ತಿಳಿಸಿ ದಂಡ ಕಟ್ಟಲು ಸಾಧ್ಯವಿಲ್ಲ ಎಂದಾಗ ಪೇದೆ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾಗಿ ಅವರು ಸಂಚಾರ ಪೊಲೀಸ್ ಜಂಟಿ ಆಯುಕ್ತರು ಮತ್ತು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ನಾನು ಲಂಚ ಕೊಡಲು ಸಮ್ಮತಿಸಿಲ್ಲ, ನನ್ನ ಬಳಿ ವಿಡಿಯೋ ದಾಖಲೆ ಇದೆ, ನನ್ನ ಮೊಬೈಲ್  ಪ್ರಮುಖ ಸಾಕ್ಷಿಯಾಗಿದೆ ಎಂದು ವಿಜಯ್ ಹಿರೇಮಠ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News