ವಕ್ಫ್ ಬೋರ್ಡ್ ಮತದಾರರ ಪಟ್ಟಿ ಸಿದ್ಧತೆಗೆ ಅಧಿಸೂಚನೆ

Update: 2020-11-03 17:04 GMT

ಬೆಂಗಳೂರು, ನ.3: ವಕ್ಫ್ ಕಾಯ್ದೆ 1995ರ(ತಿದ್ದುಪಡಿ) 2013ರಂತೆ ತಿದ್ದುಪಡಿ ಮಾಡಿರುವ ಕಾಯ್ದೆಯ ಕಲಂ14(2) ಮತ್ತು(3)ರ ಅಡಿಯಲ್ಲಿ ರಾಜ್ಯ ವಕ್ಫ್ ಮಂಡಳಿಯ ಬಾರ್ ಕೌನ್ಸಿಲ್‍ನ ಮುಸ್ಲಿಮ್ ಸದಸ್ಯರು, ಬಾರ್ ಕೌನ್ಸಿಲ್‍ನ ಮುಸ್ಲಿಮ್ ಮಾಜಿ ಸದಸ್ಯರು ಈ ಮತಕ್ಷೇತ್ರಗಳಿಗೆ ಮತದಾರರ ಪಟ್ಟಿಯ ತಯಾರಿಕೆ ಕುರಿತು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಮತದಾರರ ನೋಂದಣಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.

ನ.10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ನ.13ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತಿದ್ದು, ನ.13 ರಿಂದ 27ರವರೆಗೆ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಿಯಮ 13(ಸಿ)ರಂತೆ ಅಂತಿಮ ಮತದಾರರ ಪಟ್ಟಿಯನ್ನು ಡಿ.1ರಂದು ಪ್ರಕಟಿಸಲಾಗುವುದು ಎಂದು ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News