ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಅರ್ಜಿ ಆಹ್ವಾನ

Update: 2020-11-03 17:07 GMT

ಧಾರವಾಡ, ನ.3: 2020-21ನೇ ಸಾಲಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ (ಎನ್.ಎಸ್.ಪಿ) ಅನ್ವಯ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖ್, ಭೌದ್ದರು ಹಾಗೂ ಪಾರ್ಸಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ.

ವಿದ್ಯಾರ್ಥಿ ವೇತನ ಯೋಜನೆಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್‍ನ ವೆಬ್‍ಸೈಟ್ www.sochalarships.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. (www.gokdom.kar.nic.in ಅಥವಾ www.dom.karnataka.gov.in ನಲ್ಲಿ ದೊರೆಯವುದು). ಆನ್‍ಲೈನ್ ಅರ್ಜಿಸುವ ಬಗ್ಗೆ ವಿವರವಾದ ಸೂಚನೆಗಳು/ಕ್ರಮಾವಳಿಗಳು ಮತ್ತು ಸಂದೇಹಗಳಿಗೆ ಉತ್ತರಗಳು (ಎಫ್‍ಎಕ್ಯೂಗಳು) www.gokdom.kar.nic.in  ಅಥವಾ www.dom.karnataka.gov.in ರಲ್ಲಿ ದೊರೆಯುವುದು.      

ಹೆಚ್ಚಿನ ವಿವರಗಳಿಗಾಗಿ ಧಾರವಾಡ ಜಿಲ್ಲಾ ಉರ್ದು ಇ.ಸಿ.ಓ/ತಾಲೂಕು ಉರ್ದು ಸಿ.ಆರ್.ಪಿ ಇವರನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕಾಗಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ/ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಮೆಟ್ರಿಕ್ ನಂತರದ ಮತ್ತು ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಧಾರವಾಡ-9035972618, ಹುಬ್ಬಳ್ಳಿ-88677718261, ಕಲಘಟಗಿ-9538912399, ಕುಂದಗೋಳ-8904661872, ನವಲಗುಂದ-8746894524, ಜಿಲ್ಲಾ ಕಚೇರಿ ಸಂಖ್ಯೆ-0836-2971590 ಸಂಪರ್ಕಿಸಬಹುದೆಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಅಬ್ದುಲ್ ರಶೀದ್ ಮಿರ್ಝಾನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News