ಬಿಜೆಪಿಯನ್ನು ಹಿಂದಿಕ್ಕಿದ ಕಾಂಗ್ರೆಸ್ ಸಾಮಾಜಿಕ ಜಾಲತಾಣ

Update: 2020-11-04 15:04 GMT

ಬೆಂಗಳೂರು, ನ.4: ರಾಜ್ಯದಲ್ಲಿ ನಡೆದ ಉಪ ಚುನಾವಣೆ ಹಾಗೂ ಮೇಲ್ಮನೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣದ ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು, ಬಿಜೆಪಿಗೆ ಸಡ್ಡು ಹೊಡೆದು ಹಿಂದಿಕ್ಕಿದೆ.

ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ನಾಲ್ಕು ಮೇಲ್ಮನೆ ಸದಸ್ಯ ಸ್ಥಾನಗಳಿಗಾಗಿ ನಡೆದ ದೈವಾರ್ಷಿಕ ಚುನಾವಣೆ ವೇಳೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ತಂಡವು ಹೆಚ್ಚು ಶ್ರಮ ವಹಿಸಿದ್ದು, ಬಿಜೆಪಿಯನ್ನು ಹಿಂದಿಕ್ಕಿದೆ.

ಕೇಂದ್ರದಲ್ಲಿ ಅಧಿಕ ಬಹುಮತದೊಂದಿಗೆ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದ ಸಂದರ್ಭದಿಂದ ಬಿಜೆಪಿ ಸಾಮಾಜಿಕ ಜಾಲತಾಣದ ತಂಡವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಅತ್ಯಂತ ಪ್ರಬಲವಾಗಿತ್ತು. ಅಲ್ಲದೆ, ಅವರು ಹಾಕುತ್ತಿದ್ದ ಪೋಸ್ಟ್‍ಗಳು ಹೆಚ್ಚು ಜನರನ್ನು ತಲುಪುತ್ತಿತ್ತು. ಇದೀಗ ಉಪ ಚುನಾವಣೆ ಹಾಗೂ ಪರಿಷತ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ನ ಜಾಲತಾಣ ತಂಡವು ಸಕ್ರಿಯವಾಗಿದ್ದು, ಹೆಚ್ಚು ಜನರನ್ನು ತಲುಪಿದೆ.

ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣವು ಹಾಕಿದ ಪೋಸ್ಟ್ ಅನ್ನು 2,33,11,117 ಜನರು ವೀಕ್ಷಿಸಿದ್ದು, 42,09,157 ಮಂದಿಗೆ ಪೋಸ್ಟ್ ತಲುಪಿದೆ. ಕಾಂಗ್ರೆಸ್‍ನ ಜಾಲತಾಣದಲ್ಲಿ ಪ್ರಕಟಿಸಲಾದ ವಿಡಿಯೋಗಳು 1,38,67,436 ಮಂದಿ ವೀಕ್ಷಣೆ ಮಾಡಿದ್ದಾರೆ. ಇನ್ನು 52,34,524 ಅಷ್ಟು ಪೋಸ್ಟ್ ಎಂಗೇಜ್‍ಮೆಂಟ್ ಅನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News