×
Ad

ಮಕ್ಕಳ ಅಶ್ಲೀಲ ವೀಡಿಯೋ ಫಾರ್ವರ್ಡ್ ಆರೋಪ: ಯುವಕನ ಬಂಧನ

Update: 2020-11-04 21:51 IST

ಶಿವಮೊಗ್ಗ, ನ.4: ಸೈಬರ್ ಟಿಪ್ ಲೈನ್ ನಿಂದ ಬಂದ ಮಾಹಿತಿ ಮೇರೆಗೆ ಫೇಸ್ ಬುಕ್ ಮೆಸೆಂಜರ್ ಮೂಲಕ ಮಕ್ಕಳ ಅಶ್ಲೀಲ ವೀಡಿಯೋ ಫಾರ್ವರ್ಡ್ ಮಾಡುತ್ತಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಕಲಂ 67 (ಬಿ) ಐಟಿ ಕಾಯ್ದೆಯಂತೆ ಶಿವಮೊಗ್ಗದ ಸಿ.ಇ.ಎನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಘು ಡಿ. ಬಿನ್ ದೇವಿರಾನಾಯ್ಕ (25 ವರ್ಷ) ಎಂಬಾತನನ್ನು ಬುಧವಾರ ಸಿ.ಇ.ಎನ್ ಪೋಲಿಸರು ಬಂಧಿಸಿದ್ದು ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ನ್ನು ವಶಪಡಿಸಿಕೊಂಡಿದ್ದಾರೆ.

ಮಕ್ಕಳ ಅಶ್ಲೀಲ ವೀಡಿಯೋ ಅಥವಾ ಚಿತ್ರಗಳನ್ನು ಅಂತರ್ಜಾಲದ ಮೂಲಕ ಹುಡುಕುವುದು, ಶೇಖರಿಸುವುದು & ಫಾರ್ವರ್ಡ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67 ಪ್ರಕಾರ ಅಪರಾಧವಾಗಿರುತ್ತದೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News