ಮಾಧ್ಯಮ ಅವಾರ್ಡ್2020: ಮಾಧ್ಯಮ ಸಂಸ್ಥೆಗಳಿಂದ ರಾಷ್ಟ್ರಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಬೆಂಗಳೂರು, ನ.4: ಭಾರತ ಚುನಾವಣಾ ಆಯೋಗವು ಚುನಾವಣೆಗೆ ಸಂಬಂಧಿಸಿದಂತೆ 2020ನೇ ಸಾಲಿನಲ್ಲಿ ಮತದಾರರ ಶಿಕ್ಷಣ ಮತ್ತು ಅರಿವು ಮೂಡಿಸುವಲ್ಲಿ ಅತ್ಯುತ್ತಮ ಪ್ರಚಾರ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡ ಮಾಧ್ಯಮ ಸಂಸ್ಥೆಗಳಿಂದ ರಾಷ್ಟ್ರಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ಪ್ರಶಸ್ತಿಯನ್ನು ಒಟ್ಟು ನಾಲ್ಕು ವಿಭಾಗಗಳಲ್ಲಿ ನೀಡಲಾಗುತ್ತಿದ್ದು, ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ (ಟೆಲಿವಿಷನ್), ರೆಡಿಯೋ ಮತ್ತು ಆನ್‍ಲೈನ್ (ಇಂಟರ್‍ನೆಟ್)/ಸೋಷಿಯಲ್ ಮೀಡಿಯಾ ಸಂಸ್ಥೆಗಳು “National Media Award-2020” ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆಸಕ್ತ ಮಾಧ್ಯಮ ಸಂಸ್ಥೆಗಳು ನೇರವಾಗಿ ಭಾರತ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದೆ. ಪವನ್ ದಿವಾನ್, ಅಧೀನ ಕಾರ್ಯದರ್ಶಿ(ಕಮ್ಯುನಿಕೇಷನ್) ಭಾರತ ಚುನಾವಣಾ ಆಯೋಗ, ನಿರ್ವಾಚನಾ ಸದನ್, ಅಶೋಕ ರಸ್ತೆ, ನವ ದೆಹಲಿ-110 001.
ಹೆಚ್ಚಿನ ಮಾಹಿತಿಗಾಗಿ ಭಾರತ ಚುನಾವಣಾ ಆಯೋಗದ ವೆಬ್‍ಸೈಟ್ ವೀಕ್ಷಿಸಬಹುದಾಗಿದೆ ಅಥವಾ media.election.eci@gmail.com ಇ-ಮೇಲ್ ಮಾಡಬಹುದಾಗಿದೆ. ದೂರವಾಣಿ ಸಂಖ್ಯೆ 011-23052133 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.