ಬೋಧಕರು ಮನೆಯಿಂದಲೆ ಕರ್ತವ್ಯ ನಿರ್ವಹಿಸಲು ಅನುಮೋದನೆ
Update: 2020-11-04 23:13 IST
ಬೆಂಗಳೂರು, ನ.4: 2020-21ನೆ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳ ಪ್ರಾರಂಭಕ್ಕೆ ಅಗತ್ಯವಿರುವ ಪೂರ್ವಸಿದ್ಧತೆಗಳಾದ ಡಿಜಿಟಲ್ ಲರ್ನಿಂಗ್, ಆನ್‍ಲೈನ್/ಆಫ್ ಲೈನ್ ಬೋಧನೆ, ಸ್ಟಡಿ ಮೆಟಿರಿಯಲ್ ಸಿದ್ಧತೆ, ಎಲ್‍ಎಂಎಸ್ ಸಿದ್ಧತೆ ಮುಂತಾದವುಗಳ ಬಗ್ಗೆ ತಯಾರಿ ಮಾಡಿಕೊಳ್ಳಲು, ಇಲಾಖಾ ವ್ಯಾಪ್ತಿಯ ಸರಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ, ಎಲ್ಲ ವಿಶ್ವವಿದ್ಯಾಲಯಗಳ ಬೋಧಕರಿಗೆ ನ.4ರಿಂದ 11ರವರೆಗೆ ಮನೆಯಿಂದಲೆ ಕರ್ತವ್ಯ ನಿರ್ವಹಿಸಲು ಅನುಮೋದನೆ ನೀಡಲಾಗಿದೆ ಹಾಗೂ ಪ್ರಾಂಶುಪಾಲರು ಸೂಚಿಸುವ ಬೋಧಕರು ಕಾಲೇಜುಗಳಲ್ಲಿನ ತುರ್ತು ಕೆಲಸಗಳನ್ನು ನಿರ್ವಹಿಸಲು ಮತ್ತು ಪರೀಕ್ಷಾ ಕಾರ್ಯಗಳಿದ್ದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ.ಹಿರೇಮಠ ಸುತ್ತೋಲೆ ಹೊರಡಿಸಿದ್ದಾರೆ.