×
Ad

2021ನೇ ಸಾಲಿನ ಸಾರ್ವಜನಿಕ ರಜಾ ದಿನಗಳ ಪಟ್ಟಿ ಬಿಡುಗಡೆ

Update: 2020-11-05 20:02 IST

ಬೆಂಗಳೂರು, ನ.5: ಪ್ರತಿ ವರ್ಷದಂತೆ ಮುಂದಿನ 2021ರ ವರ್ಷದ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದೆ.

ಕರ್ನಾಟಕ ಇಂಡಸ್ಟ್ರೀಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರಂತೆ ವಾರ್ಷಿಕ ಕನಿಷ್ಠ ಹತ್ತು ದಿನಗಳ ರಜೆಯನ್ನು ಎಲ್ಲಾ ಕಾರ್ಮಿಕರಿಗೂ ಸಂಸ್ಥೆಗಳು ನೀಡುವಂತೆ ಸೂಚಿಸಿದೆ.

ರಜಾ ದಿನಗಳ ಪಟ್ಟಿ: ಜನವರಿ 14 ಗುರುವಾರ-ಮಕರ ಸಂಕ್ರಾಂತಿ, ಜನವರಿ 26 ಮಂಗಳವಾರ- ಗಣರಾಜ್ಯೋತ್ಸವ, ಮಾರ್ಚ್ 11 ಗುರುವಾರ- ಮಹಾಶಿವರಾತ್ರಿ, ಎಪ್ರಿಲ್ 2 ಶುಕ್ರವಾರ- ಗುಡ್ ಫ್ರೈಡೆ, ಎಪ್ರಿಲ್ 13 ಮಂಗಳವಾರ- ಚಂದ್ರಮಾನ ಯುಗಾದಿ, ಎಪ್ರಿಲ್ 14 ಬುಧವಾರ- ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಎಪ್ರಿಲ್ 25 ರವಿವಾರ- ಮಹಾವೀರ ಜಯಂತಿ, 1 ಮೇ 2021, ಶನಿವಾರ- ಕಾರ್ಮಿಕರ ದಿನಾಚರಣೆ, ಮೇ 14 ಶುಕ್ರವಾರ- ರಂಝಾನ್, ಬಸವ ಜಯಂತಿ, ಜುಲೈ 21 ಬುಧವಾರ- ಬಕ್ರಿದ್

ಆಗಸ್ಟ್ 15 ರವಿವಾರ- ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 19 ಗುರುವಾರ- ಮುಹರ್ರಂ, ಆಗಸ್ಟ್ 20 ಶುಕ್ರವಾರ- ವರ ಮಹಾಲಕ್ಷ್ಮೀ ಹಬ್ಬ, ಸೆಪ್ಟೆಂಬರ್ 10 ಶುಕ್ರವಾರ- ಗಣೇಶ ಚತುರ್ಥಿ, ಅಕ್ಟೋಬರ್ 2 ಶನಿವಾರ- ಗಾಂಧಿ ಜಯಂತಿ, ಅಕ್ಟೋಬರ್ 6 ಬುಧವಾರ- ಮಹಾಲಯ ಅಮವಾಸ್ಯೆ, ಅಕ್ಟೋಬರ್ 14 ಗುರುವಾರ- ಆಯುಧ ಪೂಜೆ, ಅಕ್ಟೋಬರ್ 19 ಮಂಗಳವಾರ- ಮೀಲಾದುನ್ನಬಿ, ಅಕ್ಟೋಬರ್ 20 ಬುಧವಾರ- ವಾಲ್ಮೀಕಿ ಜಯಂತಿ, ನವೆಂಬರ್1 ಸೋಮವಾರ- ಕನ್ನಡ ರಾಜ್ಯೋತ್ಸವ, ನವೆಂಬರ್ 3- ನರಕ ಚತುರ್ದಶಿ, ನವೆಂಬರ್ 5 ಶುಕ್ರವಾರ- ಬಲಿ ಪಾಡ್ಯಮಿ, ನವೆಂಬರ್ 22 ಸೋಮವಾರ- ಕನಕ ದಾಸ ಜಯಂತಿ ಡಿಸೆಂಬರ್ 25 ಶನಿವಾರ- ಕ್ರಿಸ್ಮಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News