ದೊಮ್ಮನಗದ್ದೆ: ಡೇರಿಯಲ್ಲಿನ ಸಮಸ್ಯೆ ಬಗೆಹರಿಸಲು ಹಾಲು ಉತ್ಪಾದಕರ ಒತ್ತಾಯ
ಹನೂರು, ನ.5: ತಾಲೂಕಿನ ದೊಮ್ಮನಗದ್ದೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯ ಬೇಜವಬ್ದಾರಿತನದಿಂದ ಡೇರಿಯನ್ನು ಒಂದು ವಾರದಿಂದ ಬಾಗಿಲು ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ. ಇಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ ಸಮರ್ಥವಾಗಿ ಡೇರಿಯನ್ನು ಮುನ್ನಡೆಸುವ ಸಮರ್ಥ ವ್ಯಕ್ತಿಗಳಿಗೆ ವಹಿಸಿಕೊಡುವಂತೆ ಚಾಮುಲ್ ಅಧಿಕಾರಿಗಳಿಗೆ ಹಾಲು ಉತ್ಪಾದಕರು ಒತ್ತಾಯಿಸಿದ್ದಾರೆ.
ಇಲ್ಲಿನ ಅಧಕ್ಷ, ಕಾರ್ಯದರ್ಶಿ ಬೇಜವಬ್ದಾರಿತನದಿಂದ ಇತ್ತಿಚಿನ ದಿನಗಳಲ್ಲಿ ಈ ಬಿಎಂಸಿ ಕೇಂದ್ರ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದ್ದು, ಡೇರಿಯನ್ನೇ ನಂಬಿ ಹೈನುಗಾರಿಕೆಯಲ್ಲಿ ತೊಡುಗಿರುವ ಹಲವು ರೈತರು ಹಾಗೂ ರೈತ ಮಹಿಳೆಯರಿಗೆ ತೀವ್ರ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, 6 ವಾರಗಳಿಂದ ಇಲ್ಲಿನ ಸದಸ್ಯರಿಗೆ ಹಣ ಪಾವತಿ ಮಾಡದೆ ಸತಾಯಿಸುತ್ತಿದ್ದ ಕಾರ್ಯದರ್ಶಿ ಇತ್ತೀಚಿನ ದಿನಗಳಲ್ಲಿ ಡೇರಿಯ ಬಾಗಿಲನ್ನು ತೆರೆಯದೇ ಕಣ್ಮರೆಯಾಗಿದ್ದಾರೆ ಎಂದು ಹಾಲು ಉತ್ಪಾದಕರು ಆರೋಪಿಸಿದ್ದಾರೆ.
ಈ ಸಂಬಂಧಪಟ್ಟ ಚಾಮುಲ್ ಅಧಿಕಾರಿಗಳು ಇತ್ತ ಗಮನಹರಿಸಿ, ಹೈನುಗಾರಿಕೆಯನ್ನೇ ನಂಬಿ ಬದುಕು ಈ ಭಾಗದ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ದೊಮನಗದ್ದೆ ಡೇರಿ ಸದಾ ಚಟುವಟಿಕೆಯಲ್ಲಿ ಇರುವಂತೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದೂಮ್ಮನಗದ್ದೆ ಹಾಲು ಉತ್ಪಾದಕರ ಸಂಘದಲ್ಲಿರುವ ಅವ್ಯವಸ್ಥೆಯನ್ನು ಅಧಿಕಾರಿಗಳ ಬಳಿ ಮಾಹಿತಿ ಪಡೆದು ಅಲ್ಲಿಯ ರೈತರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು.
-ನಂಜುಂಡಸ್ವಾಮಿ, ಕೆಎಂಎಫ್ ನಿರ್ದೇಶಕ