ಚಿತ್ರದುರ್ಗ: ನ.7ರಂದು ಜಾಮಿಯ ಇಹ್ಸಾನಿಯ್ಯಾದಲ್ಲಿ ಜಶ್ನೆ ಈದ್ ಮೀಲಾದ್

Update: 2020-11-06 14:15 GMT

ಚಿತ್ರದುರ್ಗ: ಉತ್ತರ ಕರ್ನಾಟಕದ ದಅವಾ ಕ್ಷೇತ್ರದಲ್ಲಿ ಅಪಾರ ಕೊಡುಗೆಗಳನ್ನು ನೀಡಿರುವ 'ಇಹ್ಸಾನ್ ಕರ್ನಾಟಕ' ವರ್ಷಂಪ್ರತಿ ನಡೆಸುವ ಜಶ್ನೆ ಈದ್ ಮೀಲಾದ್ ಮಹಾ ಕಾನ್ಫರೆನ್ಸ್ ಕೆಸಿಎಫ್ (ಐ.ಎನ್.ಸಿ) ಹಾಗೂ ಇಹ್ಸಾನ್ ಕರ್ನಾಟಕದ ಸಹಯೋಗದಲ್ಲಿ ನಾಳೆ (ನ.7) ಚಿತ್ರದುರ್ಗದಲ್ಲಿ ನಡೆಯಲಿದೆ.

ಇಹ್ಸಾನ್ ಕರ್ನಾಟಕ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ 12 ಜಿಲ್ಲೆಗಳಲ್ಲಿ ನೂರಾರು ಮದರಸ ಮಸ್ಜಿದ್ ಹಾಗೂ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿಧ್ಯಾಭ್ಯಾಸಗಳನ್ನು ನೀಡುತ್ತಿದ್ದು, ಅನಿವಾಸಿ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಸಹಯೋಗದಲ್ಲಿ ಉಚಿತ ವಿದ್ಯಭ್ಯಾಸ ನೀಡುತ್ತ ಶೈಕ್ಷಣಿಕ ಕ್ರಾಂತಿ ನಡೆಸುತ್ತಿದೆ. ಇಹ್ಸಾನ್ ಕರ್ನಾಟಕದ ಕೇಂದ್ರ ಕಚೇರಿ ಚಿತ್ರದುರ್ಗದ ಸೀಬಾರದಲ್ಲಿರುವ ಜಾಮಿಯ ಇಹ್ಸಾನಿಯ್ಯಾದಲ್ಲಿ ಜಶ್ನೆ ಈದ್ ಮೀಲಾದ್ ಮಹಾ ಕಾನ್ಫರೆನ್ಸ್ ನಾಳೆ ನಡೆಯಲಿದೆ .

ಕಾರ್ಯಕ್ರಮದಲ್ಲಿ ಇಹ್ಸಾನ್ ಕರ್ನಾಟಕ ಮುಖ್ಯಸ್ಥ ಮೌಲಾನಾ ಶಾಫೀ ಸಅದಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷರಾದ ಮೌಲಾನಾ ಶಬೀರ್ ಅಹ್ಮದ್ ಮಿಸ್ಬಾಹಿ, ಸಯ್ಯದ್ ಗುಲಾಂ ರಸೂಲ್ ಸಾಹೇಬ್, ಕೆಸಿಎಫ್ ಐ.ಎನ್.ಸಿ ಅಧ್ಯಕ್ಷ ಡಾ.ಶೈಖ್ ಬಾವ ಅಬದಾಬಿ, ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯ ಅನ್ವರ್ ಪಾಷಾ, DCC ಚಿತ್ರದುರ್ಗ ಅಧ್ಯಕ್ಷ ತಾಜಾ ಪೀರ್, ಎಸ್ಸೆಸ್ಸೆಫ್ ಚಿತ್ರದುರ್ಗ ಜಿಲ್ಲಾ ನಾಯಕರಾದ ಅಡ್ವಕೇಟ್ ಸಾದಿಕುಲ್ಲಾ, ಅಡ್ವಕೇಟ್ ಝುಲ್ಫಿಕರ್ ಹಾಗೂ ಇನ್ನಿತರ ಇಹ್ಸಾನ್ ಕರ್ನಾಟಕ ರಾಜ್ಯ ನಾಯಕರು ಹಾಗೂ ಇನ್ನಿತರ ಉಲಮಾ ಉಮರಾ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News