ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ
Update: 2020-11-06 22:21 IST
ಮಂಡ್ಯ, ನ.6: ಸಾಲಬಾಧೆಯಿಂದ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ರೈತ ನಂಜೇಗೌಡ ಜಮೀನು ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೆಂಗು ಬೆಳೆ ಹಾಗೂ ಜಮೀನು ಅಭಿವೃದ್ಧಿ ಪಡಿಸಲೆಂದು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಕ್‍ನಲ್ಲಿ ಮೂರುವರೆ ಲಕ್ಷ ಸಾಲ ಹಾಗೂ ಮೂರು ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.