×
Ad

ಭೀಮಾ ತೀರದಲ್ಲಿ ಗುಂಡಿನ ದಾಳಿ ಪ್ರಕರಣ: ಮತ್ತೆ ಐವರು ಆರೋಪಿಗಳ ಬಂಧನ

Update: 2020-11-07 18:45 IST

ವಿಜಯಪುರ, ನ.7: ಭೀಮಾ ತೀರದ ಮಹಾದೇವ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಮತ್ತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯಪುರದ ಅತಾಲಟ್ಟಿ ಗ್ರಾಮದ ಯಾಶೀನ್ ದಂದರಗಿ (25), ಗೂಳಿ ಸೊನ್ನದ (25), ಸಿದ್ದರಾಯ ಬೊಮ್ಮನಜೋಗಿ (34), ಅಲಿಯಾಬಾದ ಗ್ರಾಮದ ಸಚಿನ ಮಾನವರ (28) ಹಾಗೂ ಚಡಚಣದ ರವಿ ಬಂಡಿ (20) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ತಿಳಿಸಿದ್ದಾರೆ.

ಮಹಾದೇವ ಸಾಹುಕಾರ್ ಹತ್ಯೆ ಯತ್ನ ಕೃತ್ಯಕ್ಕೆ ಬಳಸಿದ 2 ಪಿಸ್ತೂಲ್, 5 ಜೀವಂತ ಗುಂಡು, 4 ಮೊಬೈಲ್, 1 ಆಟೋ ರಿಕ್ಷಾ, 1 ಮಚ್ಚು ಜಪ್ತಿ ಮಾಡಲಾಗಿದೆ. ಇಲ್ಲಿವರೆಗೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News