×
Ad

ಕೊರೋನ ಪರೀಕ್ಷೆಯ ಹಣ ಮರುಪಾವತಿಯಲ್ಲಿ ಸರಕಾರದ ವಿಳಂಬ: ಖಾಸಗಿ ಲ್ಯಾಬ್‍ಗಳ ಅಸಮಾಧಾನ

Update: 2020-11-07 21:06 IST

ಬೆಂಗಳೂರು, ನ.7: ಕೊರೋನ ಸೋಂಕು ಪರೀಕ್ಷೆಯ ಹಣ ಮರುಪಾವತಿಯಲ್ಲಿ ರಾಜ್ಯ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಖಾಸಗಿ ಆರೋಗ್ಯ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ರಾಜ್ಯ ಸರಕಾರದಿಂದ ಕಳಿಸಲಾಗುವ ಕೋವಿಡ್-19 ಪರೀಕ್ಷೆಗಳ ವೆಚ್ಚಗಳಿಗೆ ಸರಕಾರ 800 ರೂ. ದರ ನಿಗದಿಪಡಿಸಿತ್ತು. ಆದರೆ ಹೆಚ್ಚುವರಿ ಹಣವನ್ನು ಖಾಸಗಿ ಲ್ಯಾಬ್‍ಗಳಿಗೆ ಮರುಪಾವತಿ ಮಾಡಬೇಕಿರುವ ಸರಕಾರ ಈವರೆಗೂ ಒಂದೇ ಒಂದು ರೂಪಾಯಿಯನ್ನೂ ಪಾವತಿ ಮಾಡಿಲ್ಲ ಎಂದು ಖಾಸಗಿ ಲ್ಯಾಬ್‍ಗಳು ಅಸಮಾಧಾನ ವ್ಯಕ್ತಪಡಿಸಿವೆ.

ಅ.16 ರಂದು ಸರಕಾರ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ 800 ರೂ. ದರ ನಿಗದಿಪಡಿಸಿತ್ತು. ಸ್ಯಾಂಪಲ್‍ಗಳನ್ನು ಸಾರಿಗೆ ಮೂಲಕ ಖಾಸಗಿ ಲ್ಯಾಬ್‍ಗಳಿಗೆ ಕಳಿಸುವುದಕ್ಕೆ 400 ರೂ. ನಿಗದಿಪಡಿಸಿತ್ತು. ನಾಲ್ಕು ವಾರಗಳಿಂದ ಸರಕಾರ ಮರುಪಾವತಿ ಮಾಡಿಲ್ಲ ಎಂದು ಖಾಸಗಿ ಲ್ಯಾಬ್ ನವರು ಆರೋಪಿಸಿದ್ದಾರೆ.

ಲ್ಯಾಬ್‍ಗಳು ಅನೇಕ ಪೂಲ್ ಟೆಸ್ಟ್ ಗಳನ್ನೂ ಮಾಡಿವೆ, ಎರಡನೇ ಬಾರಿ ನಡೆಸಿದ ಟೆಸ್ಟ್ ಗಳಿಗೆ ಸರಕಾರ ಹಣ ಕೊಟ್ಟಿಲ್ಲ ಎಂದು ಖಾಸಗಿ ಲ್ಯಾಬ್‍ಗಳು ದೂರಿವೆ.

ಈ ಬಗ್ಗೆ ಖಾಸಗಿ ವೈದ್ಯಕೀಯ ಪ್ರಾಂಶುಪಾಲರು ಮಾತನಾಡಿದ್ದು, ತಮ್ಮ ಸಂಸ್ಥೆಗಳೂ ಸಹ ಟೆಸ್ಟಿಂಗ್‍ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸರಕಾರ ಈವರೆಗೂ 29,700 ರೂ. ನೀಡಬೇಕಿದೆ ಈವರೆಗೂ ಒಂದೇ ಒಂದು ರೂಪಾಯಿಯನ್ನೂ ನೀಡಿಲ್ಲ. ಲ್ಯಾಬ್ ಸ್ಥಾಪನೆಗೆ 1.5 ಕೋಟಿ ರೂ. ಖರ್ಚು ಮಾಡಿರುತ್ತೇವೆ, ಸರಕಾರ ಮರುಪಾವತಿ ಮಾಡದೇ ಇರುವುದಕ್ಕೆ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News