×
Ad

ಪತ್ನಿ, ಮಕ್ಕಳೆದುರು ಮೀನುಗಾರ ಜಲಸಮಾಧಿ

Update: 2020-11-07 22:40 IST

ದಾವಣಗೆರೆ, ನ.11: ಪತ್ನಿ ಮತ್ತು ಮಕ್ಕಳೆದುರು ಮೀನುಗಾರನೊಬ್ಬ ಜಲಸಮಾಧಿಯಾದ ಘಟನೆ ಹೊನ್ನಾಳ್ಳಿ ತಾಲೂಕಿನ ಬಿದರಗಡ್ಡೆ ಗ್ರಾಮದ ತುಂಗಾಭದ್ರಾ ನದಿಯಲ್ಲಿ ಶನಿವಾರ ನಡೆದಿದೆ.  

ರಾಜಪ್ಪ (45) ಜಲಸಮಾಧಿಯಾದ ಮೀನುಗಾರ. ತನ್ನ ಪತ್ನಿ ಇಬ್ಬರು ಮಕ್ಕಳನ್ನು ತೆಪ್ಪದಲ್ಲಿ ಕರೆದುಕೊಂಡು ಮೀನಿಗೆ ಬಲೆ ಬಿಡಲು ರಾಜಪ್ಪ ಮುಂದಾಗಿದ್ದ ವೇಳೆ ಬಿಪಿ ಹೆಚ್ಚಳವಾಗಿ ತಲೆಸುತ್ತು ಬಂದು ನೀರಲ್ಲಿ ಬಿದ್ದಿದ್ದಾರೆ. ಈ ವೇಳೆ ಪತ್ನಿ ಧೃತಿಗೆಡದೆ ತೆಪ್ಪ ಹುಟ್ಟುಹಾಕಿಕೊಂಡು ನದಿ ದಡಕ್ಕೆ ಬಂದು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದು, ಬಳಿಕ ಸ್ಥಳಕ್ಕೆ ತೆರಳಿ ಶವಕ್ಕಾಗಿ ಹುಡುಕಾಟ ನಡೆಸಿ ಶವವನ್ನು ಪತ್ತೆ ಮಾಡಿದ್ದಾರೆ.

ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News