ಸಾವಿನಲ್ಲೂ ಒಂದಾದ ಅಕ್ಕ-ತಮ್ಮ
Update: 2020-11-07 23:07 IST
ಬಾಗಲಕೋಟೆ, ನ.7: ಅಕ್ಕ ಮತ್ತು ತಮ್ಮ ಸಾವಿನಲ್ಲೂ ಒಂದಾಗಿರುವ ಅಪರೂಪದ ಮನ ಕಲಕುವ ಘಟನೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಬಾಗವಾನಪೇಟೆಯ ಕಾಂಗ್ರೆಸ್ ಧುರೀಣ, ಲಕ್ಷ್ಮೀ ಸಹಕಾರಿ ಬ್ಯಾಂಕಿನ ಮಾಜಿ ನಿರ್ದೇಶಕ 61 ವರ್ಷದ ಶಂಕರ ಸಿಂಧೆ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿತ್ಯ ತಮ್ಮನಿಗೆ ಆರೈಕೆ ಮಾಡುತ್ತಿದ್ದ ಅಕ್ಕ ಸುಮನ್ ಬಾಯಿ ತಮ್ಮನಿಗೆ ಬೆಳಗ್ಗೆ ಚಹಾ ಕೊಡಲು ಬಂದವರು ತಮ್ಮನ ಸಾವಿನ ವಿಷಯ ತಿಳಿದು ಶಾಕ್‍ನಿಂದ ತಮ್ಮನ ಶವದ ಮೇಲೆ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಹೃದಯಾಘಾತದಿಂದ ಸುಮನ್ ಬಾಯಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಅರ್ಧ ಗಂಟೆ ಅಂತರದಲ್ಲಿ ಅಕ್ಕ ತಮ್ಮ ಸಾವಿನಲ್ಲೂ ಒಂದಾಗಿದ್ದು, ತಮ್ಮನ ಮೇಲಿನ ಪ್ರೀತಿ ಸಾವಿನಲ್ಲೂ ಒಂದಾಗುವಂತೆ ಮಾಡಿದೆ.