ಡಿಜೆ-ಕೆಜಿ ಹಳ್ಳಿ ಗಲಭೆ ಪ್ರಕರಣ: ಆರೋಪಿಗಳಿಗಾಗಿ ಮುಂದುವರಿದ ಶೋಧ
Update: 2020-11-08 18:09 IST
ಬೆಂಗಳೂರು, ನ. 8: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್, ಮಾಜಿ ಸದಸ್ಯ ಎ.ಆರ್.ಝಾಕೀರ್ ಪತ್ತೆಗಾಗಿ ಸಿಸಿಬಿ ತನಿಖೆ ಮುಂದುವರಿಸಿದೆ.
ಹಲವು ದಿನಗಳಿಂದ ನಾಪತ್ತೆಯಾಗಿರುವ ಸಂಪತ್ ರಾಜ್ ಮತ್ತು ಎ.ಆರ್.ಝಾಕೀರ್ ಎಲ್ಲಿದ್ದಾರೆ ಎನ್ನುವ ಮಾಹಿತಿಯೇ ಲಭ್ಯವಾಗಿಲ್ಲ. ಈಗಾಗಲೇ ಮೈಸೂರು, ಮಂಗಳೂರು, ಕೇರಳ ಬಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೂ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
ಆರಂಭದಲ್ಲಿ ಸಿಸಿಬಿ ಪ್ರಾಥಮಿಕವಾಗಿ ನೋಟಿಸ್ ನೀಡಿದ್ದ ವೇಳೆ ವಿಚಾರಣೆಗೆ ಝಾಕೀರ್ ಹಾಜರಾಗಿದ್ದರು. ಎರಡನೇ ಬಾರಿ ನೋಟಿಸ್ ನೀಡಿದಾಗ ಬಂಧನದ ಭೀತಿಯಿಂದ ನಾಪತ್ತೆಯಾಗಿದ್ದ. ಸದ್ಯ, ಮೊಬೈಲ್ ಕರೆಗಳ ಮಾಹಿತಿಯಂತೆ ಹಾಗೂ ಆಪ್ತರ ಮಾಹಿತಿ ಆಧರಿಸಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.