ಎಂಪಿಎಂ ಕಾರ್ಖಾನೆಗೆ ಲೀಸ್‍ಗೆ ನೀಡಿದ್ದ ಅರಣ್ಯ ವಾಪಸ್ ಪಡೆಯಲು ಆಗ್ರಹಿಸಿ ಮನವಿ

Update: 2020-11-08 15:47 GMT

ಶಿವಮೊಗ್ಗ, ನ.8: ಎಂಪಿಎಂ ಕಾರ್ಖಾನೆಗೆ ಲೀಸ್‍ಗೆ ನೀಡಿದ್ದ ಅರಣ್ಯವನ್ನು ಸರ್ಕಾರ ವಾಪಸ್ ಪಡೆದು, ಖಾಸಗಿ ಪಾಲಾಗದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿ ನಮ್ಮೂರಿಗೆ ಅಕೇಶಿಯ ಮರ ಬೇಡ ಹೋರಾಟ ಒಕ್ಕೂಟದ ಸದಸ್ಯರು ಮಾಜಿ ಮಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗದ ಹೆಲಿಪ್ಯಾಡ್‍ನಲ್ಲಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಒಕ್ಕೂಟದ ಸದಸ್ಯರು, ಎಂಪಿಎಂ ಕಾರ್ಖಾನೆ ಸ್ಥಗಿತವಾಗಿದೆ. ಕಾರ್ಖಾನೆಗೆ 20,005.42 ಹೆಕ್ಟೇರ್ ಅರಣ್ಯ ಭೂಮಿಯನ್ನು ಲೀಸ್‍ಗೆ ನೀಡಲಾಗಿತ್ತು. ಈ ಅರಣ್ಯವನ್ನು ಸರ್ಕಾರ ಹಿಂಪಡೆಯಲು ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ಕಾರ್ಖಾನೆಯ ಖಾಸಗೀಕರಣದ ಹೆಸರಲ್ಲಿ ಅರಣ್ಯ ಖಾಸಗಿ ಪಾಲಾಗುವ ಹುನ್ನಾರ ನಡೆಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪ ಮಾಡಿ, ಅರಣ್ಯವನ್ನು ಉಳಿಸಬೇಕು ಎಂದು ಒಕ್ಕೂಟದ ಸದಸ್ಯರು ಮನವಿ ಮಾಡಿದರು.

ವಕೀಲ ಕೆ.ಪಿ.ಶ್ರೀಪಾಲ್ ನೇತೃತ್ವದ ನಿಯೋಗ ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News