×
Ad

ಕೀಳುಮಟ್ಟದ ಸಂಭಾಷಣೆಯ ಆಡಿಯೊ ವೈರಲ್: ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ ಉಚ್ಚಾಟನೆ

Update: 2020-11-08 23:30 IST

ದಾವಣಗೆರೆ, ನ.8: ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಅಂಜಿನಪ್ಪ ಹಿಂದುಳಿದ ಸಮುದಾಯದ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆನ್ನಲಾದ ಆಡಿಯೋ ವೊಂದು ವೈರಲ್ ಆಗಿದೆ. 

‘ಕೆಳ ಸಮುದಾಯವರ ಮೇಲೆ ನೀ ಏನು ಬೇಕಾದರೂ ಮಾಡು ನಾನು ಬಿಡಿಸಿಕೊಂಡು ಬರುವೆ. ಆ ಜಾತಿಯವರ ಮೇಲೆ ಅತ್ಯಾಚಾರ ಮಾಡಿದರೂ ನಾನು ನಿನ್ನನ್ನು ಬಿಡಿಸಿಕೊಂಡು ಬರುವೆ. ಆದರೆ, ನಮ್ಮ ಜಾತಿಯವರಿಗೆ ತೊಂದರೆ ಮಾಡ ಬೇಡ’ ಎಂದು ಮಾತನಾಡಿದ್ದಾರೆನ್ನಲಾದ ಪೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕ ಉಜನಿ ಗ್ರಾಮದ ನಿವಾಸಿಯಾಗಿರುವ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಅಂಜಿನಪ್ಪ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ವಿವಿಧ ಸಮಾಜದ ಮುಖಂಡರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಂಜಿನಪ್ಪ ಬಿಜೆಪಿಯಿಂದ ಉಚಾಟನೆ
ಹಿಂದುಳಿದ ಸಮುದಾಯದ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವ ಆಡಿಯೋ ಪೋನ್ ಸಂಭಾಷಣೆ ವೈರಲ್ ಆದ ಹಿನ್ನೆಲೆಯಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ಅಂಜಿನಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News