ಅಮೆರಿಕದ ಹೊಸ ಆಡಳಿತದಲ್ಲಿ 5 ಲಕ್ಷ ಭಾರತೀಯರಿಗೆ ಪೌರತ್ವ ನಿರೀಕ್ಷೆ

Update: 2020-11-09 04:12 GMT

ವಾಷಿಂಗ್ಟನ್ : ಅಮೆರಿಕದಲ್ಲಿ ವಾಸವಿರುವ 11 ದಶಲಕ್ಷ ದಾಖಲೆ ರಹಿತ ವಲಸೆಗಾರರಿಗೆ ಅಮೆರಿಕದ ಪೌರತ್ವ ನೀಡುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಆಡಳಿತ ಚಿಂತನೆ ನಡೆಸಿದೆ. ಇದರಲ್ಲಿ 5 ಲಕ್ಷ ಭಾರತೀಯರು ಸೇರಿದ್ದಾರೆ. ಅಂತೆಯೇ ವಾರ್ಷಿಕ ವಾಗಿ ಸೇರಿಸಿಕೊಳ್ಳುವ ವಲಸಿಗರ ಸಂಖ್ಯೆಯನ್ನು ಕನಿಷ್ಠ 95 ಸಾವಿರಕ್ಕೆ ಹೆಚ್ಚಿಸಲಿದೆ ಎಂದು ತಿಳಿದುಬಂದಿದೆ.

ಬಹುತೇಕ ವಲಸೆ ಸಮುದಾಯದವಾಗಿ, ಆದರೆ ಕೆಲ ಪ್ರಕರಣಗಳಲ್ಲಿ ಅಮೆರಿಕದ ಮೂಲವನ್ನು ಹೊಂದಿರುವ ಭಾರತೀಯ ಅಮೆರಿಕನ್ನರ ಬಲ ಹೆಚ್ಚಲಿದೆ ಎಂದು ಬೈಡನ್ ಬಣದ ಪಾಲಿಸಿ ಡಾಕ್ಯುಮೆಂಟ್‌ನಲ್ಲಿ ಹೇಳಲಾಗಿದೆ.

"ವಲಸೆ ನೀತಿಯಲ್ಲಿ ಸುಧಾರಣೆ ಹಾಗೂ ಇಡೀ ವ್ಯವಸ್ಥೆಯನ್ನು ಆಧುನೀಕರಿಸುವ ಸಂಬಂಧ ಮಸೂದೆ ಜಾರಿಗೊಳಿಸುವ ಸಂಬಂಧ ಬೈಡೆನ್ ಈಗಾಗಲೇ ಅಮೆರಿಕದ ಕಾಂಗ್ರೆಸ್ ಜತೆ ಕಾರ್ಯ ಆರಂಭಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಐದು ಲಕ್ಷ ಭಾರತೀಯರೂ ಸೇರಿದಂತೆ 11 ದಶಲಕ್ಷ ದಾಖಲೆ ರಹಿತ ವಲಸಿಗರಿಗೆ ಪೌರತ್ವ ನಿಡುವ ಮೂಲಕ ಕುಟುಂಬಗಳನ್ನು ಒಟ್ಟಾಗಿ ಇಡುವುದು ಮೊದಲ ಆದ್ಯತೆ" ಎಂದು ವಿವರಿಸಲಾಗಿದೆ.

ಬೈಡನ್ ಆಡಳಿತವು ಕುಟುಂಬ ಆಧರಿತ ವಲಸೆಯನ್ನು ಬೆಂಬಲಿಸಲಿದೆ ಮತ್ತು ಕುಟುಂಬ ವೀಸಾ ಬ್ಯಾಕ್‌ಲಾಗ್ ಕಡಿಮೆ ಮಾಡುವುದೂ ಸೇರಿದಂತೆ ಕುಟುಂಬ ಏಕೀಕರಣವನ್ನು ಅಮೆರಿಕ ವಲಸೆ ವ್ಯವಸ್ಥೆಯ ಮುಖ್ಯ ತತ್ವವನ್ನಾಗಿ ಅಳವಡಿಸಿಕೊಳ್ಳಲಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News