ಪಟಾಕಿ ನಿಷೇಧ: ರಾಜ್ಯ ಸರಕಾರದ ನಿರ್ಧಾರಕ್ಕೆ ಬಿಜೆಪಿ ಶಾಸಕ ಯತ್ನಾಳ್ ವಿರೋಧ
Update: 2020-11-09 17:05 IST
ವಿಜಯಪುರ, ನ.9: ಕೊರೋನ ಸೋಂಕು ಹರಡುವ ಭೀತಿ ಹಿನ್ನೆಲೆ ಸರಕಾರ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಮುಂದಾಗುತ್ತಿದ್ದಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಹಿಂದೂಗಳು ದೀಪಾವಳಿ, ನವರಾತ್ರಿ, ಗಣೇಶ ಹಬ್ಬವನ್ನು ಸಾಮೂಹಿಕವಾಗಿ ಆಚರಿಸುತ್ತಾರೆ. ಆಗೆಲ್ಲ ಶಬ್ದ ರಹಿತ ದೀಪಾವಳಿ, ಪರಿಸರ ಸ್ನೇಹಿ ಗಣೇಶೋತ್ಸವ ಎಂದೆಲ್ಲ ಬೋಧನೆ ಮಾಡಲಾಗುತ್ತದೆ. ಇದೇ ರೀತಿ ರಕ್ತರಹಿತ ಬಕ್ರೀದ್, ನಿಶಬ್ದ ಶುಕ್ರವಾರ, ಪಟಾಕಿ ಇಲ್ಲದ ಡಿಸೆಂಬರ್ 31ರ ರಾತ್ರಿ ಜಾರಿಗೆ ಬರಲಿ ಎಂದು ಹೇಳಿದ್ದಾರೆ.
ಧ್ವನಿವರ್ಧಕ ಬಳಸಿ ಕೂಗುವುದು, ರಸ್ತೆಯಲ್ಲಿ ಸಾಮೂಹಿಕ ನಮಾಝ್ ಮಾಡುವುದು ಬೇಡ. ನಾವು ಮನೆಯಲ್ಲೇ ದೀಪ ಬೆಳಗಿಸುತ್ತೇವೆ. ಧ್ವನಿವರ್ಧಕ ಬಳಸದೇ ನಮಾಜ್ ಮಾಡಲಿ. ರಸ್ತೆಯಲ್ಲಿ ಬೇಡ ಎಂದು ಬರದುಕೊಂಡಿದ್ದಾರೆ.