ಡ್ರಗ್ಸ್ ದಂಧೆ ಪ್ರಕರಣ: ಮಾಜಿ ಸಚಿವರ ಪುತ್ರನ ಬಂಧನ

Update: 2020-11-09 16:08 GMT
ದರ್ಶನ್ ಲಮಾಣಿ

ಬೆಂಗಳೂರು, ನ.9: ಡ್ರಗ್ಸ್ ದಂಧೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಗಳಿಗೆ ಸಹಾಯ ಮಾಡಿರುವ ಆರೋಪದಡಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿಯನ್ನು ಬಂಧಿಸಿರುವ ಸಿಸಿಬಿ ತನಿಖಾಧಿಕಾರಿಗಳು, ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ

ಡ್ರಗ್ ಪೆಡ್ಲರ್ ಗಳಿಗೆ ಆಶ್ರಯ ನೀಡುತ್ತಿದ್ದ ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಗಳಿಗೆ ರಕ್ಷಣೆ ನೀಡಿದ ಆರೋಪ ದರ್ಶನ್ ಲಮಾಣಿ ಮೇಲಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮಾಜಿ ಸಚಿವನ ಪುತ್ರ ಬಂಧನ-ಸುದ್ದಿಗೆ ಸೇರಿಸಿ

ದರ್ಶನ್ ಲಮಾಣಿ ಜತೆ 8 ಜನರು !

ಡಾರ್ಕ್‍ನೆಟ್ ಜಾಲತಾಣ ಮೂಲಕ ವಿದೇಶಿ ಅಂಚೆ ಕಚೇರಿಯಿಂದ ಹೈಡ್ರೋ ಗಾಂಜಾ ಆಮದು ಆರೋಪದಡಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಸೇರಿದಂತೆ ಇದುವರೆಗೂ 8 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಸಂಜಯ ನಗರದ ನಿವಾಸಿಗಳಾದ ಸುಜಯ್, ಪ್ರಸಿದ್ಧಿ ಶೆಟ್ಟಿ, ಮದನ್, ಆಶೀಶ್, ಕೊಡಗಿನ ಹೇಮಂತ್ ಮುದ್ದಪ್ಪ, ಕುಮುಟಾ ಮೂಲದ ಸುನೀಶ್ ಹೆಗ್ಡೆ, ಹಾವೇರಿಯ ದರ್ಶನ ಲಮಾಣಿ, ಮಲ್ಲೇಶ್ವರಂ ಪಂಕಜ ಕೋಠಾರಿ ಬಂಧಿತ ಆರೋಪಿಗಳು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಒಂದೇ ಗುಂಪಿನ ಸದಸ್ಯರಾಗಿದ್ದು, ಡಾರ್ಕ್ ವೆಬ್ ಮೂಲಕ ವಿದೇಶದಿಂದ ಹೈಡ್ರೋ ಗಾಂಜಾವನ್ನು ಮೊದಲಿಗೆ ಹೊಸದಿಲ್ಲಿ ಚೆನ್ನೈ ಮತ್ತು ಕೊಲ್ಕತ್ತಾಕ್ಕೆ ಡ್ರಗ್ಸ್ ಬಂದಿಳಿಯುತ್ತೆ. ಅಲ್ಲಿಂದ ಬೆಂಗಳೂರಿನ ಚಾಮರಾಜಪೇಟೆಗೆ ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News