ಲಾಕ್‍ಡೌನ್ ನಿಂದ ರಾಜ್ಯದ ದೇವಸ್ಥಾನಗಳ ಆದಾಯಕ್ಕೆ ಭಾರೀ ಪ್ರಮಾಣದ ಹೊಡೆತ

Update: 2020-11-09 17:22 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.9: ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಮಾಣ ಅಧಿಕವಾಗುತ್ತಿದ್ದರಿಂದ ಲಾಕ್‍ಡೌನ್ ಘೋಷಿಸಿದ ಪರಿಣಾಮ ಹಾಗೂ ಎಲ್ಲ ದೇವಾಲಯಗಳನ್ನು ಮುಚ್ಚಿದ್ದರಿಂದ ದೇವಸ್ಥಾನಗಳ ಆದಾಯಕ್ಕೆ ಭಾರಿ ಪ್ರಮಾಣದ ಹೊಡೆತ ಬಿದ್ದಿದೆ.

ಈ ವರ್ಷದ ಆದಾಯ ರೂ. 1860.77 ಲಕ್ಷವಾಗಿದ್ದರೆ, ಕಳೆದ ವರ್ಷದ ಆದಾಯ ರೂ. 31,745.69 ಲಕ್ಷಗಳಾಗಿತ್ತು. ಮುಜರಾಯಿ ಇಲಾಖೆ ಬಿಡುಗಡೆ ಮಾಡಿರುವ ಲೆಕ್ಕಪತ್ರದ ಪ್ರಕಾರ ರಾಜ್ಯದ 21 ಪ್ರಮುಖ ದೇವಸ್ಥಾನಗಳ ಆದಾಯದಲ್ಲಿ ಶೇ. 72ರಷ್ಟು ಇಳಿಕೆಯಾಗಿದೆ. ಸಾಮಾನ್ಯವಾಗಿ ದೇವಸ್ಥಾನಗಳ ಪ್ರತಿ ತ್ರೈಮಾಸಿಕ ಆದಾಯ ರೂ. 7,936 ಲಕ್ಷ ಇರುತ್ತಿದ್ದು, ವಾರ್ಷಿಕ ಆದಾಯ ರೂ. 31,000 ಲಕ್ಷ ದಾಟುತ್ತಿತ್ತು. ಆದರೆ, ಲಾಕ್‍ಡೌನ್‍ನಿಂದ ಪ್ರಸಕ್ತ ಆರ್ಥಿಕ ವರ್ಷದ ದೇವಸ್ಥಾನಗಳ ಆದಾಯ ಕಳೆದ ವರ್ಷದ ಆದಾಯದಲ್ಲಿ ಕೇವಲ ಶೇ 28 ರಷ್ಟು ಪಾಲು ಹೊಂದಿದೆ.

ರಾಜ್ಯದ ಅತಿ ಶ್ರೀಮಂತ ದೇವಸ್ಥಾನ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆರ್ಥಿಕ ವರ್ಷ 2019-2020 ರಲ್ಲಿ ರೂ. 9,892.24 ಲಕ್ಷ ಆದಾಯ ಕಂಡಿತ್ತು. 2020-21 ಆರ್ಥಿಕ ವರ್ಷದಲ್ಲಿ (ಈವರೆಗೂ) ರೂ. 428.69 ಲಕ್ಷ ಆದಾಯ ಮಾತ್ರ ಕಂಡಿದೆ. ಸೆಪ್ಟೆಂಬರ್ ನಂತರ ಕೊನೆ ಹಂತದ ಲಾಕ್‍ಡೌನ್ ತೆರವಿನಿಂದ ಜನರ ಓಡಾಟ, ಹಬ್ಬಗಳು ಇರುವ ಕಾರಣ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಹೆಚ್ಚಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News