ಉಪಚುನಾವಣೆ: 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ

Update: 2020-11-10 17:13 GMT

ಲಕ್ನೊ, ನ.10: 11 ರಾಜ್ಯಗಳಲ್ಲಿ 58 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 40ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು/ಮುನ್ನಡೆ ಸಾಧಿಸುವುದರೊಂದಿಗೆ ಬಿಜೆಪಿ ಮೇಲುಗೈ ಸಾಧಿಸುವುದು ಬಹುತೇಕ ಖಚಿತವಾಗಿದೆ.

ಮಧ್ಯಪ್ರದೇಶದಲ್ಲಿ ಚುನಾವಣೆ ನಡೆದ 28 ಸ್ಥಾನಗಳಲ್ಲಿ 19ರಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಗುಜರಾತ್‌ನಲ್ಲಿ ಎಲ್ಲಾ ಎಂಟು ಸ್ಥಾನಗಳನ್ನೂ ಗೆಲ್ಲುವ ಉತ್ಸಾಹದಲ್ಲಿದ್ದರೆ, ಉತ್ತರಪ್ರದೇಶದಲ್ಲಿ ಚುನಾವಣೆ ನಡೆದ 7 ಕ್ಷೇತ್ರಗಳ ಪೈಕಿ 5ರಲ್ಲಿ ಮುನ್ನಡೆಯಲ್ಲಿದೆ.

ಕರ್ನಾಟಕದಲ್ಲಿ ಎರಡೂ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದ್ದರೆ ಮಧ್ಯಪ್ರದೇಶದಲ್ಲಿ ಬಿಜೆಪಿ 21ರಲ್ಲಿ ಮುನ್ನಡೆ ಸಾಧಿಸಿದ್ದು ಕಾಂಗ್ರೆಸ್ 6 ಸ್ಥಾನಗಳಲ್ಲಿ ಮತ್ತು ಬಿಎಸ್‌ಪಿ ಒಂದು ಸ್ಥಾನದಲ್ಲಿ ಮುನ್ನಡೆಯಲ್ಲಿದೆ ಎಂದು ವರದಿಯಾಗಿದೆ.

ಉತ್ತರಪ್ರದೇಶದಲ್ಲಿ ಉಪಚುನಾವಣೆ ನಡೆದ 7 ಸ್ಥಾನಗಳಲ್ಲಿ ಬಿಜೆಪಿ 6ರಲ್ಲಿ, ಸಮಾಜವಾದಿ ಪಕ್ಷ 1ರಲ್ಲಿ ಮುನ್ನಡೆಯಲ್ಲಿದೆ.

ಮಣಿಪುರದಲ್ಲಿ ಚುನಾವಣೆ ನಡೆದ 5 ಸ್ಥಾನಗಳಲ್ಲಿ ಬಿಜೆಪಿ 2ರಲ್ಲಿ ಗೆದ್ದಿದ್ದರೆ 2ರಲ್ಲಿ ಮುನ್ನಡೆಯಲ್ಲಿದೆ. ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ 1, ಕಾಂಗ್ರೆಸ್ 1 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಒಡಿಶಾದಲ್ಲಿ ಆಡಳಿತದಲ್ಲಿರುವ ಬಿಜು ಜನತಾ ದಳ(ಬಿಜೆಡಿ) ಚುನಾವಣೆ ನಡೆದ ಎರಡೂ ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಹರ್ಯಾಣದಲ್ಲಿ 1 ಸ್ಥಾನಕ್ಕೆ ನಾಗಾಲ್ಯಾಂಡ್‌ನಲ್ಲಿ 2 ಸ್ಥಾನಕ್ಕೆ, ತೆಲಂಗಾಣದಲ್ಲಿ 1 ಸ್ಥಾನಕ್ಕೆ ಚುನಾವಣೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News