ಹಸಿರು ಪಟಾಕಿ ಎಂದರೆ ಏನು ಎಂದು ತಿಳಿದುಕೊಂಡು ಹೇಳುತ್ತೇನೆ: ಸಚಿವ ಡಾ.ಸುಧಾಕರ್

Update: 2020-11-11 09:59 GMT

ಮೈಸೂರು, ನ.11: ''ಹಸಿರು ಪಟಾಕಿ ಎಂದರೆ ಏನು ಎಂದು ತಿಳಿದುಕೊಂಡು ಹೇಳುತ್ತೇನೆ'' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಕೊರೋನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಸಂತೋಷದ ವಿಚಾರ. ದೀಪಾವಳಿ ಆಚರಣೆ ಸಂಬಂಧ ತಜ್ಞರ ಸಮಿತಿ ರಚನೆ ಮಾಡಿ ಅವರ ವರದಿಯನ್ನು ಮುಖ್ಯಮಂತ್ರಿಗೆ ನೀಡಿದ್ದೆ. ಮೊದಲಿಗೆ ಅವರು ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧ ಮಾಡುವುದಾಗಿ ಹೇಳಿದರು. ನಂತರ ಹಸಿರು ಪಟಾಕಿ ಮಾತ್ರ ಹಚ್ಚಬೇಕು ಎಂದು ಹಳಿದ್ದಾರೆ ಎಂದರು.

ಹಸಿರು ಪಟಾಕಿ ಎಂದರೆ ಏನು ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿವ ಸುಧಾಕರ್, ನನಗೂ ಗೊತ್ತಿಲ್ಲ ತಿಳಿದುಕೊಂಡು ಹೇಳುತ್ತೇನೆ ಎಂದು ಹೇಳಿದರು.

ಕೊರೋನ ನಿಯಮ ರಾಜಕೀಯ ಪಕ್ಷಗಳಿಗೆ ಅನ್ವಯಿಸುವುದಿಲ್ಲವೇ ಎಂದಿದ್ದಕ್ಕೆ ಉತ್ತರಿಸಿದ ಅವರು. ಎಲ್ಲರಿಗೂ ಅನ್ವಯವಾಗಲಿದೆ. ಇವರ ಮೇಲೆ ಕ್ರಮ ಜರುಗಿಸಲು ನಾನು ವಿಫಲನಾಗಿದ್ದೇನೆ. ಆದರೆ ಎಲ್ಲ ರಾಜಕೀಯ ಪಕ್ಷಗಳು ಜವಾಬ್ದಾರಿಯುತವಾಗಿ  ನಡೆದುಕೊಳ್ಳಬೇಕು ಜೊತೆಗೆ ಸಾಮಾಜಿಕ ಬದ್ಧತೆಯಿಂದ ಇರಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News