ಭಯೋತ್ಪಾದಕ ಹಫೀಝ್ ಸಯೀದ್ ಬಂಟನಿಗೆ 32 ವರ್ಷ ಜೈಲು

Update: 2020-11-12 17:51 GMT

ಲಾಹೋರ್ (ಪಾಕಿಸ್ತಾನ), ನ. 12: ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಬುಧವಾರ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಫೀಝ್ ಸಯೀದ್‌ನ ಜಮಾಅತು ದಅವಾ (ಜೆಯುಡಿ) ಸಂಘಟನೆ ಸೇರಿದ ಭಯೋತ್ಪಾದಕನೊಬ್ಬನಿಗೆ 32 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿರುವ ಎರಡು ಪ್ರಕರಣಗಳಲ್ಲಿ ಯಾಹ್ಯಾ ಮುಜಾಹಿದ್‌ಗೆ ಈ ಜೈಲುಶಿಕ್ಷೆ ವಿಧಿಸಲಾಗಿದೆ.

ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಹಫೀಝ್ ಸಯೀದ್‌ನ ಭಾವ ಸೇರಿದಂತೆ ಇನ್ನೂ ಇಬ್ಬರು ಜೆಯುಡಿ ಭಯೋತ್ಪಾದಕರು ಭಯೋತ್ಪಾದನೆಗೆ ಹಣಕಾಸು ನೆರವು ನೀಡಿರುವ ಪ್ರಕರಣಗಳಲ್ಲಿ ದೋಷಿ ಎಂಬುದಾಗಿ ತೀರ್ಪು ನೀಡಿದೆ.

‘‘ಭಯೋತ್ಪಾದನೆ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಇಜಾಝ್ ಅಹ್ಮದ್ ಬುತ್ತಾರ್ ಜೆಯುಡಿಯ ಯಾಹ್ಯಾ ಮುಜಾಹಿದ್‌ಗೆ ಎರಡು ಪ್ರಕರಣಗಳಲ್ಲಿ 32 ವರ್ಷಗಳ ಶಿಕ್ಷೆ ವಿಧಿಸಿದ್ದಾರೆ. ಪ್ರೊಫೆಸರ್ ಝಫರ್ ಇಕ್ಬಾಲ್ ಮತ್ತು ಪ್ರೊಫೆಸರ್ ಹಫೀಝ್ ಅಬ್ದುಲ್ ರಹ್ಮಾನ್ ಮಕ್ಕಿ (ಹಫೀಝ್ ಸಯೀದ್‌ನ ಭಾವ)ಗೆ ಕ್ರಮವಾಗಿ 16 ಮತ್ತು ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ’’ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News