ಚಲಿಸುತ್ತಿದ್ದ ರೈಲಿನಿಂದ ನದಿಗೆ ಬಿದ್ದಿದ್ದ ಯುವತಿಯ ಮೃತದೇಹ ಪತ್ತೆ

Update: 2020-11-14 11:21 GMT

ಶಿವಮೊಗ್ಗ, ನ.14: ಚಲಿಸುತ್ತಿದ್ದ ರೈಲಿನಿಂದ ತುಂಗಾ ನದಿಗೆ ಬಿದ್ದಿದ್ದ ಯುವತಿಯ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ   ಹಿಂದೆ ರೈಲಿನ ಬೋಗಿಯ ಬಾಗಿಲ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸಹನಾ ಎಂಬ ಯುವತಿ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಳು. ಆಕೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳೀಯರ ನೆರವಿನಿಂದ ಎರಡು ದಿನಗಳ ಕಾಲ ಸತತ ಹುಡುಕಾಟ ನಡೆಸಿದ್ದರು.

ಶನಿವಾರ ಬೆಳಗ್ಗೆ ತುಂಗಾನದಿಯಲ್ಲಿ ಸಹನಾಳ ಮೃತದೇಹ ಪತ್ತೆಯಾಗಿದೆ. ಗಾಡಿಕೊಪ್ಪದ ಸಹನಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರಾತ್ರಿ ರೈಲಿನಲ್ಲಿ ಬರುವ ಸಂದರ್ಭದಲ್ಲಿ ಸೇತುವೆಯಲ್ಲಿ ರೈಲು ಸಂಚರಿಸುವಾಗ ಈ ಅವಘಡ ಸಂಭವಿಸಿತ್ತು.

ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News