×
Ad

ನ.17ರಿಂದ ಕಾಲೇಜು-ಹಾಸ್ಟೆಲ್‍ಗಳ ಪುನಾರಂಭ: ವಿದ್ಯಾರ್ಥಿ-ಸಿಬ್ಬಂದಿಯ ಕಡ್ಡಾಯ ಕೊರೋನ ಪರೀಕ್ಷೆಗೆ ಸೂಚನೆ

Update: 2020-11-14 18:19 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.14: ರಾಜ್ಯಾದ್ಯಂತ ನ.17ರಿಂದ ಕಾಲೇಜುಗಳು ಹಾಗೂ ಹಾಸ್ಟೆಲ್‍ಗಳು ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕಡ್ಡಾಯ ಆರ್‍ಟಿಪಿಸಿಆರ್ ಮಾದರಿಯ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.

ಈಗಾಗಲೇ ಎಲ್ಲ ಕಡೆಗಳಲ್ಲಿ ಕಾಲೇಜು ಮತ್ತು ಹಾಸ್ಟೆಲ್‍ಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಎಲ್ಲೆಡೆ ಕೊಠಡಿಗಳು, ಹೊರಾಂಗಣ ಸೇರಿದಂತೆ ಕಾಲೇಜು ಹಾಗೂ ಹಾಸ್ಟೆಲ್‍ಗಳಿಗೆ ಸ್ಯಾನಿಟೈಜ್ ಮಾಡಲಾಗಿದೆ. ಮುನ್ನೆಚ್ಚರಿಕೆಯ ಭಾಗವಾಗಿ ಸರಕಾರ ಸೂಚಿಸಿರುವ ವಿಧಾನದ ಪ್ರಕಾರ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೊರೋನ ಸೋಂಕು ಪರೀಕ್ಷೆ ನಡೆಸಿ 72 ಗಂಟೆಗಳೊಳಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.

ಆರೋಗ್ಯ ಸಿಬ್ಬಂದಿ ವಿದ್ಯಾರ್ಥಿಗಳು ಹಾಗೂ ಪ್ರಾದ್ಯಾಪಕರು ಮತ್ತು ಸಿಬ್ಬಂದಿಯ ಮೂಗು ಮತ್ತು ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿದ ಕೂಡಲೇ ಪ್ರಯೋಗಾಲಯಗಳಿಗೆ ರವಾನಿಸಬೇಕು. ವರದಿಯ ಫಲಿತಾಂಶವನ್ನು ವ್ಯಕ್ತಿಯ ದೂರವಾಣಿ ಸಂಖ್ಯೆಗೆ ರವಾನಿಸಬೇಕು. ಕಡ್ಡಾಯವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ(ಐಸಿಎಂಆರ್) ಪೋರ್ಟಲ್‍ನಲ್ಲಿ ವರದಿಯ ಮಾಹಿತಿ ದಾಖಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News