ಅಂಕೋಲ: ಫೈಝೀಸ್ ರಬೀಹ್ ಕ್ಯಾಂಪೇನ್ ಸಮಾರೋಪ
ಅಂಕೋಲ, ನ.15. ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ ಪ್ರವಾದಿ ಮುಹಮ್ಮದ್ (ಸ.) ಅವರ ಬೋಧನೆಗಳನ್ನು, ಸಂದೇಶಗಳನ್ನು ಸ್ವಯಂ ಅನುಸರಿಸಿ ಸಮುದಾಯಕ್ಕೂ ಅದನ್ನು ಬೋಧಿಸುವ ಮಹತ್ತರ ಹೊಣೆಗಾರಿಕೆ ಉಲಮಾಗಳ ಮೇಲಿದೆ ಎಂದು ಕುಂಬೋಳ್ ಸೈಯದ್ ಅಲಿ ತಂಙಳ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಫತ್ಹುಲ್ಲಾ ಶಾ ದರ್ಗಾ ವಠಾರದಲ್ಲಿ ಶನಿವಾರ ನಡೆದ ರಾಜ್ಯ ಫೈಝೀಸ್ ಅಸೋಶಿಯೇಶನ್ ವತಿಯಿಂದ ಹಮ್ಮಿಕೊಂಡಿದ್ದ ರಬೀಹ್ ಕ್ಯಾಂಪೇನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ಖಾಝಿ ಇಶ್ತಿಯಾಕ್ ಅಹ್ಮದ್ ಮುಫ್ತಿ ಮಾತನಾಡಿ, ಪ್ರವಾದಿಯವರ ಅನುಕರಣೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ, ನ್ಯಾಯ, ಸಚ್ಚಾರಿತ್ರ್ಯ ಮತ್ತು ಸಮಾನತೆ ನೆಲೆಗೊಳ್ಳಲು ಸಾಧ್ಯ ಎಂದರು.
ಫೈಝೀಸ್ ಉಪಾಧ್ಯಕ್ಷ ಶರೀಫ್ ಫೈಝಿ ಕಡಬ ಅಧ್ಯಕ್ಷತೆ ವಹಿಸಿದ್ದರು.
ಶೇಖ್ ಮುಹಮ್ಮದ್ ಫೈಝಿ ಉರ್ದುವಿನಲ್ಲಿ, ಸಿರಾಜುದ್ದೀನ್ ಫೈಝಿ ಮಾಡನ್ನೂರು ಕನ್ನಡದಲ್ಲಿ ಹಾಗೂ ಅಬ್ದುಲ್ ಕರೀಂ ಫೈಝಿ ಮಲಯಾಳಂನಲ್ಲಿ ಸಂದೇಶ ಭಾಷಣಗೈದರು.
ಮುಖ್ಯ ಅತಿಥಿಗಳಾಗಿ ಸೈಯದ್ ಇಸ್ಮಾಯೀಲ್ ನೂರುಲ್ಲಾ ಫೀರ್ಝಾದೆ ಅಂಕೋಲ, ಅಂಕೋಲ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಮಂಝರ್ ಹುಸೈನ್ ಸೈಯದ್, ಫೈಝೀಸ್ ರಾಜ್ಯ ಕೋಶಾಧಿಕಾರಿ ಕೆ.ಕೆ.ಸುಲೈಮಾನ್ ಫೈಝಿ ಕನ್ಯಾನ, ಉಪಾಧ್ಯಕ್ಷ ಉಮರ್ ಫೈಝಿ ಸಾಲ್ಮರ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬ್ದುರ್ರಹ್ಮಾನ್ ಫೈಝಿ ಬಜಾಲ್, ಫೈಝೀಸ್ ಚಿಕ್ಕಮಗಳೂರು ಜಿಲ್ಲಾ ಸಮಿತಿ ನಿರ್ವಾಹಕ ಮುಹಮ್ಮದ್ ಸಲೀಂ ಫೈಝಿ ಇರ್ಫಾನಿ ಮೂಡಿಗೆರೆ, ಬೆಂಗಳೂರು ಜಿಲ್ಲಾ ಸಮಿತಿಯ ನಿರ್ವಾಹಕ ಉಸ್ಮಾನ್ ಫೈಝಿ ಬೆಂಗಳೂರು, ಉತ್ತರ ಕನ್ನಡ ಜಿಲ್ಲೆಯ ಫೈಝೀಸ್ ನಿರ್ವಾಹಕ ಝುಬೈರ್ ಫೈಝಿ ಅಂಕೋಲ, ಉತ್ತರ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ನವಾಝ್ ಅಬ್ದುಲ್ಲಾ ಶೇಖ್, ಸೈಯದ್ ಅಬ್ದುರ್ರಹ್ಮಾನ್ ಖಾದ್ರಿ, ಅಂಕೋಲ ಅಂಜುಮನ್ ಇಸ್ಲಾಂ ಕಾರ್ಯದರ್ಶಿ ನಿಝಾರ್ ಅಹ್ಮದ್ ಉಸ್ಮಾನ್ ಶಾ, ಉಪಾಧ್ಯಕ್ಷ ರಿಝ್ವಾನ್ ಝಮೀರ್ ಮುಲ್ಲಾ, ಗಂಗಾವತಿ ಮಸೀದಿಯ ಅಧ್ಯಕ್ಷ ಅಹ್ಮದ್ ಬಶೀರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಫೈಝೀಸ್ ಹೊರತಂದ ಕ್ಯಾಲೆಂಡರನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ವಿತರಣೆಗೆ ಚಾಲನೆ ನೀಡಲಾಯಿತು. ಇತ್ತೀಚೆಗೆ ನಿಧನರಾದ ಫೈಝೀಸ್ ಅಧ್ಯಕ್ಷ ಉಸ್ಮಾನುಲ್ ಫೈಝಿಯವರ ಪತ್ನಿ ನಫೀಸಾರಿಗೆ ಖತ್ಮುಲ್ ಕುರ್ ಆನ್ ವಿಶೇಷ ಪ್ರಾರ್ಥನೆ ನಡೆಯಿತು.
ಫೈಝೀಸ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಬೂ ಸಾಲಿಹ್ ಫೈಝಿ, ಸಮಿತಿಯ ಸದಸ್ಯ ಮುಹಮ್ಮದ್ ಸಲೀಂ ಫೈಝಿ ಇರ್ಫಾನಿ, ಜಾಬಿರ್ ಫೈಝಿ ವಿವಿಧ ಜವಾಬ್ದಾರಿ ವಹಿಸಿದ್ದರು.
ಫೈಝೀಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಮಿತ್ತಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಫೈಝಿ ಕರಾಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.