×
Ad

ದ್ವಿಚಕ್ರ ವಾಹನದಿಂದ ಆಕಸ್ಮಿಕವಾಗಿ ಬಿದ್ದ ಮಹಿಳೆ ಲಾರಿಯಡಿಗೆ ಸಿಲುಕಿ ಮೃತ್ಯು

Update: 2020-11-15 12:59 IST

ತುಮಕೂರು, ನ.15: ಚಲಿಸುತ್ತಿದ್ದ ದ್ವಿಚಕ್ರ ವಾಹನದಿಂದ ಆಕಸ್ಮಿಕವಾಗಿ ರಸ್ತೆಗೆ ಬಿದ್ದ ಮಹಿಳೆಯ ಮೇಲೆ ಹಿಂಬದಿಯಿಂದ ಬರುತ್ತಿದ್ದ ಲಾರಿ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದ ಎದುರು ರವಿವಾರ ಬೆಳಗ್ಗೆ ನಡೆದಿದೆ.

ಇಲ್ಲಿನ ವಿನೋಬಾ ನಗರದ 4ನೇ ಕ್ರಾಸ್ ನಿವಾಸಿ ತಾಹಿರಾ ಬಾನು (50) ಮೃತಪಟ್ಟ  ಮಹಿಳೆ. ಇವರು ತಮ್ಮ ಮಗನ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇಂದು ಬೆಳಗ್ಗೆ ಮಗನ ಜೊತೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಅಂತರಸನಹಳ್ಳಿಯಲ್ಲಿರುವ ತರಕಾರಿ ಮಾರುಕಟ್ಟೆಗೆ ಹೋಗಿ ತರಕಾರಿ, ಹೂವು ಖರೀದಿಸಿ ಮತ್ತೆ ಮನೆಗೆ ದ್ವಿಚಕ್ರ ವಾಹನದಲ್ಲಿ ಹಿಂದಿರುಗುತ್ತಿದ್ದ ವೇಳೆ ಬಾವಿಕಟ್ಟೆ ಕಲ್ಯಾಣ ಮಂಟಪದ ಮುಂಭಾಗದಲ್ಲಿ ರಸ್ತೆ ಹೊಂಡಕ್ಕೆ ಗುಂಡಿಗೆ ವಾಹನ ಇಳಿದಿದೆ. ಈ ವೇಳೆ ಹಿಂಬದಿ ಸವಾರರಾಗಿದ್ದ ತಾಹಿರಾ ಬಾನು ಆಯತಪ್ಪಿ ಕೆಳಗೆ ಬಿದ್ದಿದ್ದಾರೆನ್ನಲಾಗಿದೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಸರಕು ಸಾಗಾಟದ ಲಾರಿ ಅವರ ಮೇಲೆ ಹರಿದಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಸಂಚಾರಿ ಠಾಣೆ ಪಿಎಸ್‌ಐ ಶಿವಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News