ದೀಪಾಲಂಕಾರ ಮಾಡಿ, ಪೂಜೆ ನೆರವೇರಿಸಿ ದೀಪಾವಳಿ ಆಚರಿಸಿದ ಮುಸ್ಲಿಮ್ ಕುಟುಂಬ

Update: 2020-11-15 15:35 GMT
ಸಾಂದರ್ಭಿಕ ಚಿತ್ರ

ಕೊಪ್ಪಳ, ನ. 15: ಜಿಲ್ಲೆಯ ಕುಷ್ಟಗಿ ತಾಲೂಕಿನ ಮುಸ್ಲಿಮ್ ಕುಟುಂಬವೊಂದು ದೀಪಾವಳಿ ಹಬ್ಬವನ್ನು ಮನೆ ಹಬ್ಬದಂತೆ ಆಚರಿಸಿ ಎಲ್ಲರ ಗಮನ ಸೆಳೆದಿದೆ.

ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ಮುಸ್ಲಿಂ ಸಮುದಾಯದ ಕುಟುಂಬ ತಲೆತಲಾಂತರಗಳಿಂದ ತಮ್ಮ ಹಬ್ಬ ಆಚರಿಸುವ ರೀತಿಯಲ್ಲಿಯೇ ಸಂಪ್ರದಾಯ ಬದ್ಧವಾಗಿ ದೀಪಾವಳಿಯನ್ನೂ ಆಚರಿಸುತ್ತ ಬಂದಿದೆ. ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿರುವ ಹುಸೇನಸಾಬ್ ದೀಪಾವಳಿವನ್ನು ಮನೆತನದ ಹಬ್ಬದ ರೀತಿ ಆಚರಿಸುತ್ತಿದ್ದಾರೆ.

ಹಬ್ಬದ ಪ್ರಯುಕ್ತ ಮನೆಯನ್ನು ದೀಪಾಲಂಕಾರ ಮಾಡಿ, ಲಕ್ಷ್ಮಿ ಕಂಬಕ್ಕೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಹೋಳಿಗೆ ನೈವೇದ್ಯ ಸಮರ್ಪಿಸಿ, ಹಣತೆ ಹಚ್ಚಿ ಭಾವೈಕ್ಯತೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News