×
Ad

ಯುವತಿಯ ಬೆಂಕಿ ಹಚ್ಚಿ ಕೊಲೆಗೈದ ಪ್ರಕರಣ: ಆರೋಪಿ ಬಂಧನ

Update: 2020-11-15 21:23 IST

ಮೈಸೂರು,ನ.15: ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ ಪ್ರಕರಣ ನಿಗೂಢ ಕೊಲೆ ಭೇದಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

ನಂಜನಗೂಡು ತಾಲೂಕು ಕರಳಪುರ ಗ್ರಾಮದ ಯವತಿಯನ್ನು ಕೊಂದ ಆರೋಪಿ ಸಿದ್ದರಾಜು ಎಂಬವನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬುರವ ಭಾಗ್ಯ(18) ಎಂಬಾಕೆ ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಕೊಲೆಯಾದ ಯುವತಿ.

ಆರೋಪಿ ಸಿದ್ದರಾಜು ಹಾಗೂ ವಕೀಲರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದ ಭಾಗ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆ ಮಾಡಿಕೊಳ್ಳಲು ಸಿದ್ದರಾಜು ನಿರಾಕರಿಸಿದ್ದ. ಮದುವೆಯಾಗುವಂತೆ ಭಾಗ್ಯ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಭಾಗ್ಯಳನ್ನ ಕರೆದೊಯ್ದು ಅತ್ಯಾಚಾರ ಮಾಡಿ, ಕೊಲೆ ಮಾಡಿ ಅಕ್ಟೋಬರ್ 8 ರಂದು ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ರಸ್ತೆ ಬದಿಯಲ್ಲಿ ಬೆಂಕಿ ಹಚ್ಚಿ ಸಿದ್ದರಾಜು ಪರಾರಿಯಾಗಿದ್ದ ಎನ್ನಲಾಗಿದೆ.

ಸೋಮವಾರ ಭಾಗ್ಯ ತಂದೆ ಮಹದೇವಶೆಟ್ಟಿ ಅವರಿಂದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು.
ಭಾಗ್ಯಳ ಮೊಬೈಲ್ ಟವರ್ ಟ್ರೇಸ್ ಮಾಡುವುದರ ಜೊತೆಗೆ ಭಾಗ್ಯ ಧರಿಸಿದ್ದ ಗೆಜ್ಜೆಯಿಂದ ಪಿರಿಯಾಪಟ್ಟಣ ಪೊಲೀಸರು ಭಾಗ್ಯ ಶವವನ್ನು ಪತ್ತೆ ಹಚ್ಚಿದ್ದು, ಆರೋಪಿ ಸಿದ್ದರಾಜುನನ್ನು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ ಮತ್ತೊಬ್ಬ ಆರೋಪಿ ಪ್ರಸನ್ನ ಕುಮಾರ್ ಬಂಧನಕ್ಕೆ ಪಿರಿಯಾಪಟ್ಟಣ ಪೊಲೀಸರು ಜಾಲ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News