ಪ್ರವಾಹ ಸಂತ್ರಸ್ತರ ಜತೆಗೆ ದೀಪಾವಳಿ ಆಚರಿಸಿದ ನಾಗತಿಹಳ್ಳಿ ಚಂದ್ರಶೇಖರ್

Update: 2020-11-15 16:28 GMT

ಕಲಬುರಗಿ, ನ. 15: ಜಿಲ್ಲೆಯ ಜೇವರ್ಗಿ ತಾಲೂಕಿನ ಇಟಗಾ ಗ್ರಾಮಕ್ಕೆ ರವಿವಾರ ಭೇಟಿ ನೀಡಿದ ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಪ್ರವಾಹ ಸಂತ್ರಸ್ತರ ಜತೆಗೆ ದೀಪಾವಳಿ ಆಚರಿಸಿದರು.

ಗ್ರಾಮದಲ್ಲಿ ನಾಗತಿಹಳ್ಳಿಯ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಹಾಗೂ ಟೆಂಟ್ ಸಿನಿಮಾ ಶಾಲೆಯ ಆಶ್ರಯದಲ್ಲಿ ಸಂತ್ರಸ್ತರಿಗೆ ಆಹಾರ ಧಾನ್ಯ, ಮಕ್ಕಗೆ ಪುಸ್ತಕ ಸಾಮಗ್ರಿ ವಿತರಿಸಿ, ಸಿಹಿ ಹಂಚಿ ಅವರು ಖುಷಿಪಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರು, ಈ ವೇದಿಕೆಯಿಂದ ಕಳೆದ 35 ವರ್ಷಗಳಿಂದ ಸಾಹಿತ್ಯ, ಪರಿಸರ ಕಾಳಜಿ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇನೆ. ಈ ವರ್ಷ ನಿಮ್ಮ ಜತೆಗೆ ಸೇರಿಕೊಂಡು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇನೆ ಎಂದು ತಿಳಿಸಿದರು.

ಉ-ಕ ಭಾಗದಲ್ಲಿ ಸಾಕಷ್ಟು ಐತಿಹಾಸಿಕ, ಪೌರಾಣಿಕ, ಪ್ರಕೃತಿ ಸೌಂದರ್ಯದ ಸ್ಥಳಗಳಿವೆ. ಆದರೂ ಈ ಭಾಗದಲ್ಲಿ ಚಿತ್ರೀಕರಣ ಅಷ್ಟಾಗಿ ಬೆಳೆದಿಲ್ಲ ಎಂಬುದು ನಿಜ. ಈ ಭಾಗವನ್ನು ಪ್ರತಿನಿಧಿಸುವಂತ ಕಥೆಗಳ ಕೊರೆತೆಯೂ ಇದಕ್ಕೆ ಕಾರಣ. ಇಲ್ಲಿನ ಕಲಾವಿದರು, ಸ್ಥಳಗಳಿಗೆ ಉತ್ತಮ ಭವಿಷ್ಯವಂತೂ ಇದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News