×
Ad

ಮೇಲುಕೋಟೆ ಪ್ರದೇಶದಲ್ಲಿ ಚಿರತೆ ಹಾವಳಿ: ಸ್ಥಳೀಯರಲ್ಲಿ ಆತಂಕ

Update: 2020-11-15 22:05 IST
ಸಾಂದರ್ಭಿಕ ಚಿತ್ರ

ಮಂಡ್ಯ, ನ.15: ಜಿಲ್ಲೆಯ ಪ್ರಮುಖ ಕ್ಷೇತ್ರ ಪಾಂಡವಪುರ ತಾಲೂಕು ಜಿಲ್ಲೆಯ ಪ್ರಮುಖ ಮೇಲುಕೋಟೆ ಗುಡ್ಡ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು, ನಾಗರಿಕರು ಆತಂಕಗೊಂಡು, ಚಿರತೆ ಸೆರೆ ಹಿಡಿಯಲು ವಲಯ ಅರಣ್ಯಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.

ವಾರದಿಂದ ಆರು ಚಿರತೆಗಳು ಗುಡ್ಡಪ್ರದೇಶದ ಜೇನುಕಲ್ಲು, ಹೊಗರಮ್ಮನಬೆಟ್ಟ, ಪಲಾಷತೀರ್ಥ, ಸುತ್ತಮುತ್ತ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಸಾಕು ನಾಯಿಯನ್ನು ಹೊತ್ತೊಯ್ದಿವೆ. ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News