ಕೋವಿಡ್19: ರಾಜ್ಯದ 24 ಜಿಲ್ಲೆಗಳಲ್ಲಿ ಇಂದು ಶೂನ್ಯ ಮರಣ
Update: 2020-11-16 20:45 IST
ಬೆಂಗಳೂರು, ನ.16: ರಾಜ್ಯದಲ್ಲಿ ಅಟ್ಟಹಾಸ ಮೆರೆದಿದ್ದ ಕೋವಿಡ್19 ಇತ್ತೀಚಿನ ದಿನಗಳಲ್ಲಿ ಗಣನೀಯ ಇಳಿಮುಖ ಕಾಣುತ್ತಿದ್ದು, 10 ಸಾವಿರಷ್ಟು ಪ್ರಕರಣಗಳು ಕಂಡುಬರುತ್ತಿದ್ದ ರಾಜ್ಯದಲ್ಲಿ ಈಗ ದೈನಂದಿನ ಸಾವಿರದಷ್ಟು ಪ್ರಕರಣಗಳು ವರದಿಯಾಗುತ್ತಿವೆ.
ಸೋಮವಾರದ ಕೋವಿಡ್ ವರದಿ ಪ್ರಕಾರ 1,157 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 2,188 ಜನ ಗುಣಮುಖ ಹೊಂದಿದ್ದಾರೆ.
ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ''ರಾಜ್ಯದಲ್ಲಿ ಇಂದು 1,157 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,188 ಜನ ಗುಣಮುಖ ಹೊಂದಿದ್ದಾರೆ. ಈವರೆಗೂ ರಾಜ್ಯದಲ್ಲಿ 8,25,141 ಜನ ಗುಣಮುಖರಾಗಿದ್ದು ಚೇತರಿಕೆ ದರ 95.63% ರಷ್ಟಿದೆ. ರಾಜ್ಯದ 24 ಜಿಲ್ಲೆಗಳಲ್ಲಿ ಇಂದು ಶೂನ್ಯ ಮರಣ ದಾಖಲಾಗಿದ್ದು, ಕೋವಿಡ್ ಮರಣ ಪ್ರಮಾಣ 1.33% ರಷ್ಟಿದೆ'' ಎಂದು ತಿಳಿಸಿದ್ದಾರೆ.