ನವೆಂಬರ್ ಅಂತ್ಯಕ್ಕೆ ಮಣ್ಣಿನ ಪರೀಕ್ಷೆ‌ ನಡೆಸುವ ಮೊಬೈಲ್ ಅಗ್ರಿ ಹೆಲ್ತ್ ವಾಹನ ಬಿಡುಗಡೆ: ಸಚಿವ ಬಿ.ಸಿ.ಪಾಟೀಲ್

Update: 2020-11-17 07:08 GMT

ಬೆಂಗಳೂರು, ನ.17: ಕೃಷಿ ತಜ್ಞರೇ ರೈತರ ಕೃಷಿಗೆ ವೈದ್ಯರಾಗಬೇಕು. ಕೃಷಿ ವಿಜ್ಞಾನಿಗಳು ಕೃಷಿ ಪ್ರೊಫೆಸರ್ ಗಳು ವಿಶ್ವವಿದ್ಯಾನಿಲಯದ ಆವರಣ ಬಿಟ್ಟು ಹೊರಬರಬೇಕು. ತಮ್ಮ ಜ್ಞಾನವನ್ನು ಸಮಗ್ರವಾಗಿ ರೈತರ ಒಳಿತಿಗಾಗಿ ಉಪಯೋಗಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ(ಜಿಕೆವಿಕೆ)ದ 55ನೇ‌ ಸಂಸ್ಥಾಪನಾ‌ ದಿನಾಚರಣೆ ವೇದಿಕೆ ಕಾರ್ಯಕ್ರಮಕ್ಕೆ ಉದ್ಘಾಟನೆ ನೆರವೇರಿಸಿ ಸಚಿವರು ಮಾತನಾಡುತ್ತಿದ್ದರು.

 ಕೊಪ್ಪಳದ‌ ಪೈಲಟ್ ಯೋಜನೆಯಲ್ಲಿ 20 ರೈತ ಸಂಪರ್ಕ‌ ಕೇಂದ್ರಗಳಿಗೆ ಲ್ಯಾಬ್ ಟೂ ಲ್ಯಾಂಡ್ ಎನ್ನುವ ಮಣ್ಣಿನ ಪರೀಕ್ಷೆ‌ ನಡೆಸುವ ಮೊಬೈಲ್ ಅಗ್ರಿ ಹೆಲ್ತ್ ವಾಹನ ಈ ತಿಂಗಳ ಕೊನೆಗೆ ಬಿಡುಗಡೆ ಮಾಡಲಾಗುವುದು. ಹೊರಗುತ್ತಿಗೆ ಸೇವೆಯಾಧಾರದಲ್ಲಿ ಈ ಮೊಬೈಲ್ ಅಗ್ರಿ ಹೆಲ್ತ್ ವಾಹನಕ್ಕೆ ಅಗ್ರಿ ಗ್ಯ್ಯಾಜ್ಯುಯೇಟ್‌ಗಳನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ‌ ಎಂದರು.

ವೇದಿಕೆಯಲ್ಲಿ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಯಿತು. ಚೇರ್ಮೆನ್ ವಾಸುದೇವನ್  ಸಿಂಗಾಪುರದಿಂದ ಆನ್ಲೈನ್ ಮೂಲಕ ಮಾತನಾಡಿದರು.

ವಿಶ್ವವಿದ್ಯಾನಿಲಯದ ಕುಲಪತಿ ರಾಜೇಂದ್ರ ಪ್ರಸಾದ್ , ಕುಲಸಚಿವ ಜಿ.ಎನ್.ಧನ್‌ಪಾಲ್ ಸ್ವಾಗತಿಸಿದರು. ರಾಜಕುಮಾರ್ ಕತ್ರಿ,ಕಟಾರಿಯ ಆನ್ಲೈನ್ ಮೂಲಕ ಪಾಲ್ಗೊಂಡಿದ್ದರು.

ವಿಶ್ವವಿದ್ಯಾನಿಲಯ ಮಂಡಳಿ ನಿರ್ದೇಶಕರಾದ ದಯಾನಂದ್, ಸುರೇಶ್ ಮಾಗದ್, ಅರವಿಂದ, ರಾಮನುಜಮ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News