×
Ad

ರೈತ ಹೋರಾಟಗಾರ ಕೊಟ್ಟೂರು ಶ್ರೀನಿವಾಸ್ ನಿಧನ

Update: 2020-11-17 22:55 IST

ಹಾಸನ: ದಲಿತ ಸಂಘಟನೆ, ರೈತ ಸಂಘಟನೆಗಾಗಿ ಅವಿರತ ದುಡಿದ ಸಮಾಜಮುಖಿ ಚಿಂತನೆಯ ಹೋರಾಟಗಾರ, ಸಾಕ್ಷರತಾ ಆಂದೋಲನದ ಕಟ್ಟಾಳು ಕೊಟ್ಟೂರು ಶ್ರೀನಿವಾಸ್ (60) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಿಡ್ನಿ ವೈಫಲ್ಯ ಕಾರಣಕ್ಕಾಗಿ ಹಾಸನ ಮತ್ತು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗದ ಅವರು ಡಯಾಲಿಸಿಸ್ ಸಂದರ್ಭದಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಪ್ರಮಿಳಾ ಮಗಳು ರುಚಿರ, ಮೊಮ್ಮಗ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಹಾಸನ ನಗರದಲ್ಲಿ (ಬಿಟ್ಟಗೋಡನಹಳ್ಳಿ ಸ್ಮಶಾನ) ಬುಧವಾರ ಮಧ್ಯಾಹ್ನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News