ಅಡ್ವೈಸರ್ ಸಾಹಿತ್ಯ ಪ್ರಶಸ್ತಿ -2019 ಪ್ರಕಟ

Update: 2020-11-17 18:13 GMT

ಮಂಡ್ಯ, ನ.17: ಮಂಡ್ಯದ  ಅಡ್ವೈಸರ್ ಮಾಸ ಪತ್ರಿಕೆಯು ಪ್ರತಿ ವರ್ಷದಂತೆ 2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿ, ಎಂಟು ವಿಭಾಗಗಳಲ್ಲಿ 10 ಪ್ರಶಸ್ತಿಗಳನ್ನು ಹಿರಿಯ-ಕಿರಿಯ ಲೇಖಕರುಗಳನ್ನು ಆಯ್ಕೆ ಮಾಡಲಾಗಿದೆ. 

ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ನೇತೃತ್ವದ ತೀರ್ಪುಗಾರರ ಮಂಡಳಿ ಕೃತಿಗಳನ್ನು ಆಯ್ಕೆ ಮಾಡಿದ್ದು, ಎಲ್ಲಾ 10 ಪ್ರಶಸ್ತಿಗಳಿಗೆ ಸಮನಾಗಿ ನಗದು ಮೂರು ಸಾವಿರ ರೂಪಾಯಿಗಳು ಮತ್ತು ಪ್ರಶಸ್ತಿ ಪತ್ರ ಹೊಂದಿರುತ್ತದೆ ಎಂದು ಸಂಪಾದಕ ಸಿ.ಬಸವರಾಜುರವರು ತಿಳಿಸಿದ್ದಾರೆ.

ಕವನ ಸಂಕಲನ ವಿಭಾಗದಲ್ಲಿ  ಡಾ.ಎಂ.ಎ.ಪದ್ಮನಾಭ ಹೆಬ್ರಿ ಸ್ಮರಣಾರ್ಥ ಪ್ರಶಸ್ತಿ - ಶ್ರೀದೇವಿ ಕೆರೆಮನೆ ರವರ ‘ಬೈಟೂ ಚಹಾ’,  ಜಾನಪದ ತಜ್ಞ ದಿ.ಪ್ರೊ.ಡಿ.ಲಿಂಗಯ್ಯರವರ ಸ್ಮರಣಾರ್ಥ ಪ್ರಶಸ್ತಿ - ಡಾ.ಲಕ್ಷಣ ವಿ.ಎ.ರವರ ‘ಅಪ್ಪನ ಅಂಗಿ’.

ಕಥಾ ಸಂಕಲನ ವಿಭಾಗದಲ್ಲಿ ವಿಜಯೇಂದ್ರ ಬಂಧುಕಾರ ಸ್ಮರಣಾರ್ಥ ಪ್ರಶಸ್ತಿ- ವಿದ್ಯಾಧರ ಮುತಾಲಿಕ ದೇಸಾಯಿರವರ ‘ಹಿಮ್ಮುಖ ಹರಿದ ನದಿ’.
ಚುಟುಕ ಸಂಕಲನ ವಿಭಾಗದಲ್ಲಿ ಶ್ರೀಮತಿ ವನಜಾಕ್ಷಮ್ಮ ಅಂಗಡಿಹಟ್ಟಿ ಪುಟ್ಟಸ್ವಾಮಪ್ಪರವರ ಸ್ಮರಣಾರ್ಥ ಪ್ರಶಸ್ತಿ - ಹೆಬಸೂರು ರಂಜಾನ್ ರವರ ‘ಮಂಜಿನೊಳಗಣ ಕೆಂಡ’.

ವಚನ ಸಾಹಿತ್ಯ ವಿಭಾಗದಲ್ಲಿ ಗರಕಹಳ್ಳಿ ಚನ್ನಮಲ್ಲಪ್ಪ ಶಿವಬಸಪ್ಪ ಸ್ಮರಣಾರ್ಥ ಪ್ರಶಸ್ತಿ - ವೆಂಕಟೇಶ ಕೆ. ಜನಾದ್ರಿರವರ  ‘ಎನ್ನಲ್ಲಿ ಏನುಂಟೆಂದು’.
ಮಹಿಳಾ ಸಾಹಿತ್ಯ ವಿಭಾಗದಲ್ಲಿ ಶ್ರೀಮತಿ ಗಿರಿಜಮ್ಮ ಮತ್ತು ಚಂದ್ರಪ್ಪ ಸ್ಮರಣಾರ್ಥ ಪ್ರಶಸ್ತಿ - ಗೀತಾ ಎಸ್. ಭಟ್ ರವರ ‘ಲೆಕ್ಕ ತಪ್ಪಿದ ಚಿತ್ರಗುಪ್ತ’.
ಪುಸ್ತಕ ಪ್ರಶಸ್ತಿ ವಿಭಾಗದಲ್ಲಿ ಡಿ. ಸತ್ಯನಾರಾಯಣ ಸ್ಮರಣಾರ್ಥ ಪ್ರಶಸ್ತಿ - ಪಿ.ಡಿ.ವಾಲೀಕಾರ ರವರ ‘ಮಳೆ-ಬೆಳೆ ಸಾಂಸ್ಕೃತಿಕ ಆಚರಣೆಗಳು’, ಎ.ಎಸ್.ಬಿ.ಮೆಮೋರಿಯಲ್ ಟ್ರಸ್ಟ್ (ರಿ)  ಪ್ರಶಸ್ತಿ – ಜಯಶ್ರೀ ಜೆ.ಅಬ್ಬಿಗೇರಿ ರವರ ‘ಸಮಸ್ಯೆಗಳು ಮಗ್ಗಲು ಮುಳ್ಳುಗಳಲ್ಲ’.

ಮಕ್ಕಳ ಸಾಹಿತ್ಯ ವಿಭಾಗದಲ್ಲಿ ಶ್ರೀಮತಿ ಚನ್ನಮ್ಮ ಮತ್ತು ಸಿ.ಚಿಕ್ಕಣ್ಣ (ಮೈಸೂರು) ಸ್ಮರಣಾರ್ಥ ಪ್ರಶಸ್ತಿ - ಹ.ಸ.ಬ್ಯಾಕೋಡ ರವರ ‘ಶಾಲೆಗೆ ಬಂದರು ಗಾಂಧಿತಾತ’.

ಆಧ್ಯಾತ್ಮಿಕ ಸಾಹಿತ್ಯ ವಿಭಾಗದಲ್ಲಿ ಪಿ.ಆರ್.ಸುಬ್ಬರಾವ್ ಸ್ಮರಣಾರ್ಥ ಪ್ರಶಸ್ತಿ (ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಪ್ರಾಯೋಜಿತ) -  ಪ್ರೊ.ಪಿ.ಶ್ರೀಪತಿ ತಂತ್ರಿ ರವರ ‘ಅಜೀವಿಕರು ಮತ್ತು ಕೆಲವು ವೇದೋತ್ತರ, ದಾರ್ಶನಿಕ ಬೆಳವಣಿಗೆಗಳು’.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News