ಮರಾಠಿಗರನ್ನು ದೂರುವುದು ಸರಿಯಲ್ಲ: ಸಚಿವ ಬಿ.ಸಿ.ಪಾಟೀಲ್

Update: 2020-11-18 11:14 GMT

ಬೆಂಗಳೂರು, ನ.18: ಬೆಳಗಾವಿಯಲ್ಲಿ ಎಲ್ಲೋ ಒಂದಿಷ್ಟು ಕಿಡಿಗೇಡಿಗಳು ಮಾಡಿದ ಕೆಲಸಕ್ಕಾಗಿ ಇಡೀ ಮರಾಠಿಗರನ್ನು ದೂರುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿಯೂ ಮರಾಠಿಗರಿದ್ದಾರೆ. ಯಾರೋ ನಾಲ್ಕು ಕಿಡಿಗೇಡಿಗಳಿಗೋಸ್ಕರ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ. ಮರಾಠಿಗರಲ್ಲಿಯೂ ಕಡುಬಡವರಿದ್ದಾರೆ ಎಂದರು.

ಬೆಳಗಾವಿ ಕನ್ನಡಿಗರದ್ದೇ ಅದರಲ್ಲಿ ಎರಡನೇ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ಇದು ಕನ್ನಡಿಗರ ಸ್ವತ್ತು. ಮಹಾರಾಷ್ಟ್ರ ಡಿಸಿಎಂ ಹೇಳಿದರು ಎಂಬ ಕಾರಣಕ್ಕಾಗಿ ಇಡೀ ಸಮುದಾಯವನ್ನು ದೂಷಣೆ ಮಾಡುವುದು ತಪ್ಪು. ಅವರು ವಿನಾಕಾರಣ ಕ್ಯಾತೆ ತೆಗೆದರೆ ನಾವು ಏಕೆ ತಲೆಕಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಆನೆ ನಡೆದದ್ದೆ ದಾರಿ ಎನ್ನುವ ನಮ್ಮ ದಾರಿಯಲ್ಲಿ ನಾವು ಹೋಗೋಣ. ನಮ್ಮ ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಮಕ್ಕಳನ್ನು ನಮ್ಮ ಮುಖ್ಯಮಂತ್ರಿ, ನಮ್ಮ ಸರಕಾರ ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News