ಗ್ಲೋಬಲ್ ಸ್ಮಾರ್ಟ್ ಸಿಟಿ ಯೋಜನೆಗೆ ಬೆಂಗಳೂರು ಸೇರಿ ದೇಶದ 4 ನಗರಗಳು ಆಯ್ಕೆ

Update: 2020-11-18 11:52 GMT

ಬೆಂಗಳೂರು, ನ.18: ಗ್ಲೋಬಲ್ ಸ್ಮಾರ್ಟ್ ಸಿಟಿ ಯೋಜನೆಗೆ ಬೆಂಗಳೂರು ಆಯ್ಕೆಯಾಗಿದ್ದು, ಈ ಮೂಲಕ ಜಗತ್ತಿನ 36 ನಗರಗಳ ಸಾಲಿಗೆ ಬೆಂಗಳೂರು ಕೂಡ ಸೇರ್ಪಡೆಗೊಂಡಂತಾಗಿದೆ.

ಆಧುನಿಕ ತಂತ್ರಜ್ಞಾನದ ಮೂಲಕ ರಸ್ತೆ ಪ್ರಯಾಣವನ್ನು ಸುರಕ್ಷಿತಗೊಳಿಸುವ ಜಾಗತಿಕ ಮಟ್ಟದ ಯೋಜನೆಗೆ ಬೆಂಗಳೂರು, ಹೈದರಾಬಾದ್, ಇಂದೋರ್, ಫರೀದಾಬಾದನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ಮಾಸ್ಕೊ, ಲಂಡನ್, ಟೊರೊಂಟೊ, ಬ್ರೆಸಿಲಿಯಾ, ಮೆಲ್ಬೋರ್ನ್, ದುಬೈ ನಗರಗಳು ಇದರಲ್ಲಿ ಸೇರಿವೆ. ವಿಶ್ವ ಆರ್ಥಿಕ ವೇದಿಕೆ 22 ದೇಶಗಳ 36 ನಗರಗಳನ್ನು ಯೋಜನೆಗೆ ಆಯ್ಕೆ ಮಾಡಿದೆ. 

ಜಿ20ಗ್ಲೋಬಲ್ ಸ್ಮಾರ್ಟ್ ಸಿಟಿ ಅಲಯನ್ಸ್ ನ ಭಾಗವಾಗಿ ಜಾಗತಿಕ ಮಟ್ಟದ ಈ ಯೋಜನೆಯಲ್ಲಿ ಭಾರತದ 4 ನಗರಗಳು ಆಯ್ಕೆಯಾಗಿವೆ. ಖಾಸಗಿಕರಣದ ರಕ್ಷಣೆ, ನಿರ್ವಹಣೆ, ಆಧುನಿಕ ಸೈಬರ್ ತಂತ್ರಜ್ಞಾನದ ಮೂಲಕ ವಿಶೇಷ ಚೇತನರಿಗೆ ಉತ್ತಮ ಸೇವೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಈ ಯೋಜನೆ ನೆರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News