ತುಂಗಾ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Update: 2020-11-19 05:03 GMT

ಶಿವಮೊಗ್ಗ, ನ.19:  ಏಳು ವರ್ಷಗಳ ಹಿಂದೆ ದಾಖಲಾಗಿದ್ದ ಅಕ್ರಮ ಮದ್ಯ ಮಾರಾಟ ಪ್ರಕರಣವೊಂದರ ಆರೋಪಿ ನಟೇಶ (30) ಎಂಬಾತನನ್ನು ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೋಂದಿ ಚಟ್ನಳ್ಳಿ ಗ್ರಾಮ ನಿವಾಸಿಯಾಗಿರುವ ಈತನ ವಿರುದ್ಧ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿ 2013ರಲ್ಲಿ ಪ್ರಕರಣ ದಾಖಲಾಗಿತ್ತು. ಈತ 2016ನೇ ಸಾಲಿನಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನೆನ್ನಲಾಗಿದೆ.  

ಆರೋಪಿ ಪತ್ತೆಗಾಗಿ ತುಂಗಾ ನಗರ ಪೊಲೀಸ್ ಠಾಣೆಯ ಪಿಎಸ್ಸೈ ತಿರುಮಲೇಶ್ ರವರು ಠಾಣಾ ಸಿಬ್ಬಂದಿಯಾದ ರಾಮ್ ಕುಮಾರ್ ಎಎಸ್ಸೈ, ಸೋಮಾ ನಾಯ್ಕ್, ಸಿಎಚ್.ಸಿ ಅವರನ್ನು ನೇಮಕ ಮಾಡಿದ್ದರು. 

ಆರೋಪಿ ನಟೇಶ್ ಊರಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು  ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News