ಮಂಡ್ಯ: ನಾಲೆಯಲ್ಲಿ ಅಪರಿಚಿತ ಯುವತಿಯ ದೇಹದ ಭಾಗಗಳು ಪತ್ತೆ

Update: 2020-11-19 16:58 GMT

ಮಂಡ್ಯ, ನ.19: ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಸಮೀಪದ ಹೇಮಾವತಿ ನದಿಯ ಬಲದಂಡೆ ನಾಲೆಯಲ್ಲಿ ಅಪರಿತ ಯುವತಿಯ ಕತ್ತರಿಸಿದ ದೇಹದ ಭಾಗಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ಯುವತಿಯನ್ನು ಹತ್ಯೆಗೈದು, ನಾಲೆಯಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ.

ನಾಲೆಯಲ್ಲಿ ಯುವತಿಯ ದೇಹದ ಭಾಗಗಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ನಾಲೆಯ ವಿವಿಧ ಕಡೆ ಪತ್ತೆಯಾದ ಯವತಿಯ ರುಂಡ, ಮುಂಡ, ಕೈ, ಕಾಲುಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿರುವ ಕೆ‌.ಆರ್. ಪೇಟೆ ಪೊಲೀಸರು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News