ನಿಧಿಗಾಗಿ ಭೂಮಿ ಅಗೆಯುತ್ತಿದ್ದ ಆರೋಪ: ಮೂವರ ಬಂಧನ

Update: 2020-11-19 17:57 GMT

ಕಲಬುರ್ಗಿ, ನ.19: ದೇವಾಲಯದ ಬಳಿ ನಿಧಿಗಾಗಿ ಭೂಮಿ ಅಗೆಯುತ್ತಿದ್ದ ಆರೋಪದಡಿ ಮೂವರನ್ನು ವಾಡಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಶಾಂಪೂರ ಹಳ್ಳಿಯ ಹಣಮಂತ ಕತ್ರಿ(60), ಬಸಲಿಂಗ ಮಾಡಗಿ(33), ತರ್ಕಸಪೇಠ ಗ್ರಾಮದ ಸಾಯಿಬಣ್ಣಾ ಅರಿಕೇರಿ(55) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ರಾಂಪೂರ ಹಳ್ಳಿ-ಶಾಂಪೂರ ಹಳ್ಳಿ ಗ್ರಾಮದ ನಡುವಿನ ರಸ್ತೆ ಪಕ್ಕದ ಜಮೀನಿನಲ್ಲಿರುವ ಭಾಗ್ಯವಂತಿ ಎಂಬ ದೇವಸ್ಥಾನ ಹತ್ತಿರ ಆರು ಜನರು ನೆಲ ಅಗೆಯುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಗುರುವಾರ ನಸುಕಿನ ಜಾವ ಈ ಕೃತ್ಯವೆಸಗುತ್ತಿದ್ದ ಎನ್ನಲಾಗಿದ್ದು, ಬಾಗಲಕೋಟೆ ಮೂಲದ ಇನ್ನೂ ಮೂವರು ತಲೆ ಮರೆಸಿಕೊಂಡಿದ್ದಾರೆ. ಬಂಧಿತರಿಂದ ನೆಲ ಅಗೆಯಲು ಬಳಸಿದ್ದ ವಸ್ತುಗಳು ಹಾಗೂ ಬೈಕ್‍ಗಳನ್ನು ಪೊಲೀಸರು ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News