ಕಂಗನಾ ಜೊತೆಗಿನ ಟ್ವಿಟರ್ ವಾಗ್ವಾದದ ಬಗ್ಗೆ ಡಿ.ರೂಪಾ ಪ್ರತಿಕ್ರಿಯೆ
Update: 2020-11-20 18:08 IST
ಬೆಂಗಳೂರು, ನ.20: ದೀಪಾವಳಿ ಪಟಾಕಿ ವಿಷಯ ಕುರಿತು ನಡೆದ ಟ್ವಿಟರ್ ವಾಗ್ವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರಣಾವತ್‍ಗೆ ಗೃಹ ಇಲಾಖೆಯ ಕಾರ್ಯದರ್ಶಿ ಡಿ.ರೂಪಾ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ನಗರದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕಾನೂನು ಪಾಲನೆ ದೃಷ್ಟಿಯಿಂದ ಟ್ವೀಟ್ ಮಾಡಿದ್ದೇನೆ ಹೊರತು ಬೇರೆ ಉದ್ದೇಶವಿಲ್ಲ ಎಂದರು.
ಪಟಾಕಿ ಸಿಡಿಸದಂತೆ ಜನರಿಗೆ ತಿಳಿಸಿದ್ದೆ ಅಷ್ಟೇ. ನನ್ನ ಶ್ರದ್ಧೆ, ಪ್ರಾಮಾಣಿಕತೆ ಜನರಿಗೆ ಗೊತ್ತಿದೆ. ಅಲ್ಲದೆ, ನಾನು ಕಾನೂನು ಪಾಲನೆ ಬಿಟ್ಟು ಬೇರೆನನ್ನೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.