ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ಸರ್ಕಸ್‍ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ: ಸಿದ್ದರಾಮಯ್ಯ

Update: 2020-11-20 14:34 GMT

ಬೆಂಗಳೂರು, ನ. 20: ಹಿಂದೆಲ್ಲ ಕರ್ನಾಟಕ ರಾಜ್ಯದ ಬಿಜೆಪಿ ನಾಯಕರು, ಹೈಕಮಾಂಡ್ ಸಂಸ್ಕೃತಿ, ಮೂಲನಿವಾಸಿಗಳು-ವಲಸೆಗಾರರು, ಕುಟುಂಬ ರಾಜಕಾರಣ ಎಂಬಿತ್ಯಾದಿ ಪದಗಳನ್ನು ಜೋಡಿಸಿ ಹಗಲು-ರಾತ್ರಿ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದರು. ಇದೀಗ ಅದೇ ಆರೋಪಗಳನ್ನು ಪರಸ್ಪರ ಮಾಡ್ಕೊಂಡು ಬೆತ್ತಲಾಗುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ಸಚಿವ ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆಯೋ ಇವೆಲ್ಲ ನಿಮ್ಮ ಪಕ್ಷದ ಹಣೆಬರಹ. ಈ ಸರ್ಕಸ್‍ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ. ಶೀಘ್ರವಾಗಿ ಏನಾದರೂ ನಿರ್ಧಾರ ಕೈಗೊಂಡು ಈಗಿನ ಬಿಕ್ಕಟ್ಟು ಕೊನೆಗೊಳಿಸಿ, ಆಡಳಿತದ ಕಡೆ ಗಮನ ಕೊಟ್ಟು ರಾಜ್ಯವನ್ನು ಉಳಿಸಿ ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News