ವೈದ್ಯರ ಬ್ಲಾಕ್ ಮೇಲ್ ಪ್ರಕರಣ: ಐವರು ಆರೋಪಿಗಳ ಬಂಧನ

Update: 2020-11-20 18:22 GMT

ಮೈಸೂರು, ನ.20: ಮೊಬೈಲ್ ಮೆಮೊರಿ ಕಾರ್ಡ್ ಕಳೆದುಕೊಂಡ ವೈದ್ಯರೊಬ್ಬರನ್ನು ಬ್ಲಾಕ್ ಮೇಲ್ ಮಾಡಿ ಹಣ ಕೀಳುತ್ತಿದ್ದ ಆರೋಪದಡಿ ಐವರು ಆರೋಪಿಗಳನ್ನು ಕುವೆಂಪು ನಗರ ಠಾನೆಯ ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ದಟ್ಟಗಳ್ಳಿ ನಿವಾಸಿಯಾಗಿರುವ ಡಾ.ಪ್ರಕಾಶ್ ಬಾಬುರಾವ್ ಎಂಬವರು ಈ ಸಂಬಂಧ ಪೊಲೀಸರಿಗೆ ದೂರನ್ನು ನೀಡಿದ್ದರು. ದೂರಿನನ್ವಯ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ನೇರಳುಪ್ಪೆ ಗ್ರಾಮದ ನವೀನ್ , ಮಾೋು ಗ್ರಾಮದ ಶಿವರಾಜು, ಮುದ್ದನಹಳ್ಳಿ ಗ್ರಾಮದ ಹರೀಶ್, ಹುಣಸೂರಿನ ಅನಿತಾ, ನಂದೀಪುರದ ವಿಜ್ಜಿ ಬಂಧಿತ ಆರೋಪಿಗಳು.

2019ರ ಡಿಸೆಂಬರ್‌ನಲ್ಲಿ ವೈದ್ಯರು ಮೊಬೈಲ್‌ನಲ್ಲಿದ್ದ ಮೆಮೊರಿ ಕಾರ್ಡ್ ನ್ನು ಕಳೆದುಕೊಂಡಿದ್ದರು. ಅದರಲ್ಲಿ ಅವರ ವೈಯುಕ್ತಿಕ ಫೋಟೋಗಳಿದ್ದವು. 2020ರ ಜನವರಿಯಲ್ಲಿ 8ಗಂಟೆ ಸುಮಾರಿಗೆ ನವೀನ್ ಎಂಬಾತ ವೈದ್ಯರು ವಾಸವಿರುವ ದಟ್ಟಗಳ್ಳಿ ಮನೆಯ ಬಳಿ ತೆರಳಿ ನಿಮ್ಮ ಜೊತೆ ಮಹತ್ವವಾದ ಮಾತನಾಡುವುದಿದ್ದು ಹೊರಗಡೆ ಬನ್ನಿ ಎಂದು ಕರೆದೊಯ್ದಿದ್ದು ಹೊರಗಡೆ ಬಂದಾಗ ಶಿವರಾಜು ಮತ್ತರು ಹರೀಶ್ ಇದ್ದರು. ನಂತರ ನವೀನ್ ನನ್ನ ಜೊತೆ ಮಾತನಾಡಿ ನೀವು ಯಾವುದೋ ಮಹಿಳೆಯ ಜೊತೆ ಬೆಡ್ ರೂಂ ನಲ್ಲಿದ್ದಾಗ ತೆಗೆದ ವಿಡಿಯೋ ಇರುವ ಮೆಮರಿ ಕಾರ್ಡ್ ನನ್ನ ಬಳಿ ಇದ್ದು ನಾನು ಹೇಳಿದಂತೆ ಕೇಳಿದರೆ ಮೆಮರಿ ಕಾರ್ಡ್ ವಾಪಸ್ ಕೊಡುತ್ತೇನೆ. ಇಲ್ಲವಾದಲ್ಲಿ ವಿಡಿಯೋವನ್ನು ವಾಟ್ಸಪ್ ಫೇಸ್ ಬುಕ್ ಗಳಲ್ಲಿ ಕಳುಹಿಸಿ ನೀನು ಸಂಪಾದಿಸಿರುವ ಘನತೆ, ಗೌರವವನ್ನೆಲ್ಲ ಹರಾಜು ಹಾಕುವುದಾಗಿ ಬ್ಯಾಕ್ ಮೇಲ್ ಮಾಡಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.

ಮರ್ಯಾದಿಗೆ ಹೆದರಿ ಆಗಾಗ ಸುಮಾರು 40 ಲಕ್ಷ ರೂ.ನಷ್ಟು ಹಣವನ್ನು ನೀಡಿದ್ದೇನೆ. ಅಷ್ಟೇ ಅಲ್ಲದೆ ನನ್ನನ್ನು ಬೆದರಿಸಿ ಖಾಲಿ ಚೆಕ್‌ಗೆ ಸೈನ್ ಮಾಡಿಸಿಕೊಂಡಿದ್ದಾರೆ. ನನ್ನ ಬಳಿ ಇದ್ದ ಹಣವನ್ನು ಕಿತ್ತುೊಂಡಿದ್ದಾರೆ. ಪದೇ ಪದೇ ಹಣ ಕಿತ್ತುಕೊಂಡ, ಬೆದರಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವೈದ್ಯರು ದೂರು ನೀಡಿದ್ದರು.

ತಂಡ ರಚಿಸಿ ಆರೋಪಿಗಳನ್ನು ನ್ಯಾಯಾಧಿೀಶರ ಮುಂದೆ ಹಾಜರುಪಡಿಸಿದ್ದೇವೆ. ವಿಚಾರಣೆ ನಡೆಯುತ್ತಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ತಿಳಿಸಿದರು.

ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮಾರ್ಗದರ್ಶನದಲ್ಲಿ ಎಎಸ್ ಐ ಕಾಂತರಾಜು ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News