ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಬೆಂಕಿ

Update: 2020-11-22 16:03 GMT

ಶಿವಮೊಗ್ಗ, ನ.22: ಇಲ್ಲಿನ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಯುನಿಟ್ ನಲ್ಲಿ ಇಂದು ಎರಡು ಬಾರಿ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದರಿಂದಾಗಿ ಇಲ್ಲಿನ ವೈದ್ಯರು, ಸಿಬ್ಬಂದಿಗಳು ಮತ್ತು ಒಳ ರೋಗಿಗಳಲ್ಲಿ ಕೆಲಕಾಲ ಆತಂಕ ಮೂಡಿಸಿತು.

ಕೋವಿಡ್ ವಾರ್ಡ್ ಗೆ ಆಕ್ಸಿಜನ್ ಪೂರೈಸುವ ಹೆಚ್.ಎಫ್ ಎನ್ ಸಿ ಮಿಷಿನ್ ಸತತವಾಗಿ ಚಾಲನೆಯಲ್ಲಿಟ್ಟಿದ್ದರಿಂದ ಅಧಿಕ ಬಿಸಿಯಾಗಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಕೊರೋನ ವಾರ್ಡ್ ನಲ್ಲಿ ಯಾವ ರೋಗಿಗಳೂ ಇರಲಿಲ್ಲ. ಯಾರು ಗಾಬರಿ ಪಡುವ ಅಗತ್ಯವಿಲ್ಲವೆಂದು ಆಸ್ಪತ್ರೆಯ ಮೂಲಗಳು  ತಿಳಿಸಿವೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳಾದ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಮಧ್ಯಾಹ್ನವೂ ಇದೇ ಹೆಚ್.ಎಫ್ ಎನ್ ಸಿ ಮಿಷಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟವಾದ ಹೊಗೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಈ ಮೊದಲು ಇಲ್ಲಿನ ಮಕ್ಕಳ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಡಾ.ಶ್ರೀಧರ್ ಮತ್ತು ಡಾ.ರಘುನಂದನ್ ರವರ ಸಮಯ ಪ್ರಜ್ಞೆಯಿಂದ ಅವಘಡ ತಡೆಯುವಲ್ಲಿ ಸಫಲವಾಗಿದ್ದರು. ಇಂದು ಎರಡು ಬಾರಿ ಕಾಣಿಸಿಕೊಂಡ ಹೊಗೆ ಸ್ವಲ್ಪ ಸಮಯ ಆಸ್ಪತ್ರೆಯ ಸಿಬ್ಬಂದಿಗಳಿಗೆ ಆತಂಕ ಮೂಡಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News