10 ವಿದ್ಯಾರ್ಥಿಗಳು, 6 ಉಪನ್ಯಾಸಕರಿಗೆ ಕೊರೋನ ಸೋಂಕು ದೃಢ

Update: 2020-11-22 16:45 GMT

ವಿಜಯಪುರ: ಮಂಗಳವಾರದಿಂದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮ ಕಾಲೇಜು‌ಗಳು ಆರಂಭವಾಗಿದ್ದು, ಜಿಲ್ಲೆಯ 10 ವಿದ್ಯಾರ್ಥಿಗಳು ಹಾಗೂ 6 ಉಪನ್ಯಾಸಕರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರದಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ 3541 ವಿದ್ಯಾರ್ಥಿಗಳು ಕೊರೋನ ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ಪೈಕಿ 10 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ ಎಂದವರು ತಿಳಿಸಿದ್ದಾರೆ.

ಇವರೊಟ್ಟಿಗೆ ಜಿಲ್ಲೆಯ ನಾನಾ ಕಾಲೇಜು‌ಗಳ 283 ಉಪನ್ಯಾಸಕರೂ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ಪೈಕಿ 6 ಉಪನ್ಯಾಸಕರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News